ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಆಚರಿಸಲಾಯಿತು.
ಕಂಪ್ಲಿ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜೀವನ ಮಹಿಳೆಯರಿಗೆ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ವಿ.ಸುದರ್ಶನರೆಡ್ಡಿ ಹೇಳಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಭಾನುವಾರ ಮಾತನಾಡಿದರು. ಸಂಕಷ್ಟಗಳಿಗೆ ಹೆದರದೆ ಜೀವನ ಸಾಗಿಸಬೇಕೆನ್ನುವ ಹೇಮರಡ್ಡಿ ಮಲ್ಲಮ್ಮ, ಮಹಿಳೆಯರ ಜೀವನಕ್ಕೆ ದಾರಿದೀಪವಾಗಿದ್ದಾರೆ ಎಂದರು.
ಹೇಮ-ವೇಮ ರೆಡ್ಡಿ ಜನಸಂಘದ ಪದಾಧಿಕಾರಿಗಳಾದ ಆನಂದರೆಡ್ಡಿ, ಎಚ್.ಗಂಗಾಧರ ಮತ್ತಿತರರು ಮಾತನಾಡಿ, ಪಟ್ಟಣದ ರಸ್ತೆ, ವೃತ್ತಗಳಿಗೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹೆಸರಿಡಬೇಕು. ರೆಡ್ಡಿ ಜನಸಂಘದ ಚಟುವಟಿಕೆಗಳಿಗಾಗಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು. ಎಲ್ಲ ಜಯಂತ್ಯುತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ತಾಲೂಕು ಆಡಳಿತ ನಿಗಾ ವಹಿಸಬೇಕು. ತಹಸೀಲ್ದಾರ್, ತಾಲೂಕು ಮಟ್ಟದ ಅಧಿಕಾರಿಗಳು ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಹನೀಯರಿಗೆ ಗೌರವ ಸಲ್ಲಿಸಬೇಕು ಎಂದರು.
ಶಿರಸ್ತೇದಾರ್ ಜಿ.ಪಂಪಾಪತಿ, ಹೇಮ-ವೇಮ ರೆಡ್ಡಿಜನ ಸಂಘದ ತಾಲೂಕು ಪದಾಧಿಕಾರಿಗಳಾದ ರಾಜಶೇಖರ ರೆಡ್ಡಿ, ಡಾ.ಕೆ.ಶ್ರೀನಿವಾಸ ರೆಡ್ಡಿ, ಪವನಕುಮಾರ್ ರೆಡ್ಡಿ, ಕಾಮರೆಡ್ಡಿ ಲಕ್ಷ್ಮಣ ರೆಡ್ಡಿ, ಡಿ.ಜಡೇಶ ರೆಡ್ಡಿ, ಟಿ.ಸುರೇಶ ರೆಡ್ಡಿ, ವೆಂಕಟರೆಡ್ಡಿ, ರಮೇಶ ರೆಡ್ಡಿ, ಮಾಧವ ರೆಡ್ಡಿ, ಸಂದೀಪ್ ರೆಡ್ಡಿ, ಹರೀಶ್ ರೆಡ್ಡಿ, ತಿಪ್ಪಾರೆಡ್ಡಿ, ಎನ್.ಜಗದೀಶ್ ಮೆಟ್ರಿ ಇತರರಿದ್ದರು.