ಹಗರಿಬೊಮ್ಮನಹಳ್ಳಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು. ಪುರೋಹಿತ ಸಂತೋಷ ಆಚಾರ್, ಸಮುದಾಯದ ತಾಲೂಕು ಅಧ್ಯಕ್ಷ ಹೋಟಲ್ ಸಿದ್ದರಾಜು, ಗೌರವಾಧ್ಯಕ್ಷ ಸಿದ್ಧರಾಮಾಚಾರ್, ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ನಿಕಟಪೂರ್ವ ಅಧ್ಯಕ್ಷ ಬಡಿಗೇರ್ ಬಸವರಾಜ ಇತರರಿದ್ದರು. 
ಬಳ್ಳಾರಿ

ಯುವ ಸಮುದಾಯಕ್ಕೆ ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ಜಕಣಾಚಾರಿ

ಯುವ ಸಮುದಾಯಕ್ಕೆ ದಾರಿದೀಪ

ಹಗರಿಬೊಮ್ಮನಹಳ್ಳಿ: ಅಮರ ಶಿಲ್ಪಿ ಜಕಣಾಚಾರಿ ಯುವ ಸಮುದಾಯಕ್ಕೆ ದಾರಿ ದೀಪವಾಗಿದ್ದಾರೆ. ಅವರ ಕಲೆ ಸಮುದಾಯದ ಜೀವನ ನಿರ್ವಹಣೆಗೆ ಸ್ಪೂರ್ತಿಯಾಗಿದೆ ಎಂದು ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಹೋಟಲ್ ಸಿದ್ದರಾಜು ಹೇಳಿದರು.
ಪಟ್ಟಣದಲ್ಲಿ ವಿಶ್ವಕರ್ಮ ಸಮುದಾಯದವರಿಂದ ಗುರುವಾರ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರೋಹಿತ ಸಂತೋಷ ಆಚಾರ್, ಸಮುದಾಯದ ತಾಲೂಕು ಗೌರವಾಧ್ಯಕ್ಷ ಸಿದ್ಧರಾಮಾಚಾರ್, ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ನಿಕಟಪೂರ್ವ ಅಧ್ಯಕ್ಷ ಬಡಿಗೇರ್ ಬಸವರಾಜ, ಯುವ ಘಟಕದ ಅಧ್ಯಕ್ಷ ಕಿತ್ನೂರು ವೀರೇಶ, ಪ್ರಮುಖರಾದ ಹಂಪಸಾಗರ ಈರಣ್ಣ, ವೀರಭದ್ರಪ್ಪ, ಮಂಜುನಾಥ, ರೇವಣಸಿದ್ದಾಚಾರ್, ಧನಂಜಯ, ವೀರಬಸಪ್ಪ, ಕುಮಾರ, ರವಿ, ಈರಣ್ಣ ಅಂಕಸಮುದ್ರ, ಬಡಿಗೇರ್ ಪ್ರಸಾದ್, ಮಹಿಳಾ ಸಂಘದ ತಾಲೂಕು ಉಪಾಧ್ಯಕ್ಷರಾದ ಸೌಭಾಗ್ಯಮ್ಮ, ಅಮೃತ, ಮಂಗಳ, ನಾಗಮ್ಮ, ಕಲಾವತಿ, ಲಕ್ಷ್ಮಮ್ಮ, ಶಿಲ್ಪಾ ಇತರರಿದ್ದರು.