ಚಿನ್ನದ ಪದಕಗಳೊಂದಿಗೆ ರಜನಿ ಲಕ್ಕ 
ಬಳ್ಳಾರಿ

ಜಿಲ್ಲೆಯ ರಜನಿ ಲಕ್ಕಗೆ 5 ಚಿನ್ನದ ಪದಕ

ಪ್ರಮುಖ ಮುಖ್ಯಾಂಶಗಳು

  • ಹಿರಿಯರ ವಿಭಾಗದ ಸ್ಪರ್ಧಿ
ಬಳ್ಳಾರಿ : ಬೆಂಗಳೂರಿನ ವಿಜಯನಗರದಲ್ಲಿ ಕರ್ನಾಟಕ ಈಜು ಸಂಸ್ಥೆಯ ವತಿಯಿಂದ ಆ.29 ಮತ್ತು 30ರಂದು ಆಯೋಜಿಸಿದ್ದ 27ನೇ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಜಿಲ್ಲೆಯ ಈಜುಪಟು ರಜನಿ ಲಕ್ಕ ಅವರು 5 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 65 ರಿಂದ 69 ವರ್ಷದೊಳಗಿನ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ರಜನಿ ಲಕ್ಕ ಅವರು 200 ಮೀ. ಐ.ಎಂ., 100 ಮೀ. ಬಟರ್ ಫ್ಲೈ, 100 ಮೀ. ಬ್ರೆಸ್ಟ್ ಸ್ಟ್ರೋಕ್, 50 ಮೀ. ಬ್ರೆಸ್ಟ್ ಸ್ಟೋಕ್, 50 ಮೀ. ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಜಿಲ್ಲೆಗೆ ಕೀರ್ತಿ ತಂದ ರಜನಿ ಲಕ್ಕ ಅವರ ಸಾಧನೆಗೆ ಶಾಸಕರಾದ ಬಿ.ನಾಗೇಂದ್ರ, ನಾರಾ ಭರತರೆಡ್ಡಿ, ಡಿಸಿ ಕೆ.ನಾಗೇಂದ್ರ ಪ್ರಸಾದ್, ಎಸ್ಪಿ ಡಾ.ಸುಮನ್ ಡಿ. ಪನ್ನೇಕರ್ ಹರ್ಷ ವ್ಯಕ್ತಪಡಿಸಿದ್ದಾರೆ.