ಸಂಡೂರು ತಾಪಂ ಸಭಾಂಗಣದಲ್ಲಿ ನಡೆದ ವಿಬಿಜಿ-ರಾಮ್‌ಜಿ ತರಬೇತಿಯಲ್ಲಿ ಅಧಿಕಾರಿಗಳು-ಸಿಬ್ಬಂದಿ ಭಾಗವಹಿಸಿದ್ದರು. 
ಬಳ್ಳಾರಿ

ರಾಜ್ಯ ಸರ್ಕಾರದಿಂದ ಶೇ.40 ಅನುದಾನ ಬಿಡುಗಡೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ತಾಪಂ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ ಮಾಹಿತಿ
  • ವಿಬಿ ಜಿ ರಾಮ್ ಜಿ ತರಬೇತಿ ಕಾರ್ಯಾಗಾರ
ಸಂಡೂರು: ವಿಬಿ ಜಿ ರಾಮ್ ಜಿ ಯೋಜನೆಯಡಿ ವಾರ್ಷಿಕ 125 ದಿನ ಕೆಲಸ ನೀಡಲಾಗುತ್ತದೆ. ಕೇಂದ್ರದಿಂದ ಶೇ.60, ರಾಜ್ಯ ಸರ್ಕಾರದಿಂದ ಶೇ.40 ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಕುರುಗೋಡು ತಾಪಂ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ ಹೇಳಿದರು.
ತಾಪಂ ಸಭಾಂಗಣದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನಗೊಳಿಸುವ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಎರಡು ತಿಂಗಳು ಅತಿ ಹೆಚ್ಚು ಮಳೆಯಾಗುವ ಪ್ರದೇಶವನ್ನು ಹೊರತುಪಡಿಸಿ ಉಳಿದ ಗ್ರಾಪಂಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಮುಂದುವರಿಸಬಹುದು. ಕಟ್ಟಡ ನಿರ್ಮಾಣ, ಕೆರೆ, ನಾಲೆಗಳಲ್ಲಿ ಹೂಳೆತ್ತುವುದು, ವೈಯುಕ್ತಿಕ ಕಾಮಗಾರಿ ಒಳಗೊಂಡಿದೆ. ಕಾರ್ಮಿಕರಿಗೆ ಒಂದು ದಿನಕ್ಕೆ 382ರೂ. ಕೂಲಿ ನೀಡಲಾಗುವುದು ಎಂದರು.
ಪ್ರಭಾರ ಎಡಿ ವಸಂತ ರಾಜ್ ಮಾತನಾಡಿ, ಕೃಷಿ ಚಟುವಟಿಕೆ ಸಮಯದಲ್ಲಿ 60 ದಿನ ವಿಬಿ ಜಿ ರಾಮ್ ಜಿ ಕೆಲಸಕ್ಕೆ ವಿರಾಮ ನೀಡಲಾಗುವುದು. ಹವಾಮಾನ ಆಧರಿಸಿ 318 ಕಾಮಗಾರಿಗಳು, ಗ್ರಾಮೀಣಾಭಿವೃದ್ಧಿ ಮೂಲ ಸೌಕರ್ಯಗಳಲ್ಲಿ 266 ಕಾಮಗಾರಿ ಕೈಗೊಳ್ಳಬಹುದು ಎಂದು ತಿಳಿಸಿದರು.
ಪಿಡಿಒಗಳಾದ ಯು.ಹನುಮಂತಪ್ಪ, ಗುರುಪ್ರಸಾದ್, ಈ.ರಂಗಸ್ವಾಮಿ, ಗಂಗಾಧರ, ಶ್ರೀಕಾಂತ್, ಬೂದುಗುಂಪ ಪಕ್ಕೀರಪ್ಪ, ಜಿಲಾನ್ ಇತರರಿದ್ದರು.