ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಎಎಸ್‌ಐ ಪ್ರಭಾವತಿ, ಆಹಾರ ನಿರೀಕ್ಷಕ ಮಹಾರುದ್ರಗೌಡ ವಶ ಪಡಿಸಿಕೊಂಡರು. 
ಬಳ್ಳಾರಿ

27ಸಾವಿರ ರೂ. ಮೌಲ್ಯದ ಪಡಿತರ ಅಕ್ಕಿ ವಶ

ಸಿರಗುಪ್ಪ: ತೆಕ್ಕಲಕೋಟೆಯ ಉಪ್ಪಾರ ಹೊಸಳ್ಳಿ ಗ್ರಾಮದಿಂದ ಆಂಧ್ರದ ಹೊಳಗುಂದ ಗ್ರಾಮಕ್ಕೆ ಅಕ್ರಮವಾಗಿ ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ತೆಕ್ಕಲಕೋಟೆ ಪೊಲೀಸ್ ಠಾಣೆಯ ಎಎಸ್‌ಐ ಪ್ರಭಾವತಿ ಹಾಗೂ ಸಿರಗುಪ್ಪ ಆಹಾರ ನಿರೀಕ್ಷಕ ಮಹಾರುದ್ರಗೌಡ ನೇತೃತ್ವದ ತಂಡ ದಾಳಿ ನಡೆಸಿ 27 ಸಾವಿರ ರೂ. ಮೌಲ್ಯದ 9 ಕ್ವಿಂಟಾಲ್ ಪಡಿತರ ಅಕ್ಕಿ ವಶಪಡಿಸಿಕೊಂಡು, ತಾಳೂರು ಗ್ರಾಮದ ವಾಹನ ಚಾಲಕ ಶಿವಕುಮಾರ್ (22) ವಿರುದ್ಧ ಪ್ರಕರಣ ದಾಖಲಾಗಿದೆ.