ಕುರುಗೋಡು ತಾಲೂಕಿನ ಸಿಂಧಿಗೇರಿ ಗ್ರಾಪಂನಲ್ಲಿ ಆಯೋಜಿಸಿದ್ದ ಕಾಯಕ ಗ್ರಾಮ ಮತ್ತು ಮಹಿಳಾ ಸ್ವಸಾಹಯ ಸಂಘದ ಸಭೆಯನ್ನು ಗ್ರಾಪಂ ಅಧ್ಯಕ್ಷೆ ಜಿ ಗಾದೆಮ್ಮ ಉದ್ಘಾಟಿಸಿದರು.
ಕುರುಗೋಡು: ತಾಲೂಕಿನ ಎಚ್.ವೀರಾಪುರ, ಕಲ್ಲುಕಂಬ, ಸಿಂಧಿಗೇರಿ, ಓರ‌್ವಾಯಿ ಗ್ರಾಪಂಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಸರ್ಕಾರ ಆದೇಶ ನೀಡಿದೆ ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ ಹೇಳಿದರು.
ಸಿಂಧಗೇರಿ ಗ್ರಾಪಂನಲ್ಲಿ ಆಯೋಜಿಸಿದ್ದ ಕಾಯಕ ಗ್ರಾಮ ಮತ್ತು ಮಹಿಳಾ ಸ್ವಸಹಾಯ ಸಂಘದ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಗ್ರಾಪಂ ಏಳಿಗೆಗಾಗಿ ಸರ್ಕಾರ 19 ಅಂಶದ ಕಾರ್ಯಕ್ರಮವನ್ನು ಮುಂದಿನ ಮೂರು ವರ್ಷದಲ್ಲಿ ಜಾರಿಗೊಳಿಸಲಿದೆ. ಇದರಿಂದ ಮಾದರಿ ಗ್ರಾಪಂ ಆಗುವ ವಿಶ್ವಾಸ ಇದೆ. ಶಿಕ್ಷಣ, ಆರೋಗ್ಯ, ಬೀದಿ ದೀಪ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ತೆರಿಗೆ ಸಂಗ್ರಹ, ಪರಿಸರ ಸಂರಕ್ಷಣೆ ಕಾಯಕ ಗ್ರಾಮ ಯೋಜನೆಯ ಉದ್ದೇಶವಾಗಿದ್ದು, ಪ್ರತಿಯೊಬ್ಬರೂ ಕೈಜೊಡಿಸಬೇಕು ಎಂದು ತಿಳಿಸಿದರು.