ಬಳ್ಳಾರಿ : ಆರ್ ಎಸ್ ಎಸ್ ಸ್ಥಾಪನೆಗೊಂಡು ನೂರು ವರ್ಷಗಳು ಪೂರೈಸಿದ ಹಿನ್ನೆಲೆ ಇಲ್ಲಿನ ಪವನ್ ಹೋಟೆಲ್ ಹಿಂಭಾಗದಿಂದ ರಾಷ್ಟ್ರೀಯ ಸ್ವಯಂ ಸೇವಕ ( ಆರ್ ಎಸ್ ಎಸ್ ) ಸಂಘದಿಂದ ಭಾನುವಾರ
ಪಥಸಂಚಲನ ನಡೆಯಿತು.
ನಗರದ ಪವನ್ ಹೋಟೆಲ್ ಹಿಂಭಾಗದಿಂದ ಆರಂಭವಾದ ಗಣವೇಷದಾರಿಗಳ ಪಥ ಸಂಚಲನವು ಶ್ರೀರಾಂಪುರ ಕಾಲನಿಯ ಮುಖ್ಯ ರಸ್ತೆ, ರೂಪನಗುಡಿ ರಸ್ತೆ, ಕಣೇಕಲ್ಲು ಬಸ್ ನಿಲ್ಡಾಣ, ರಾಘವೇಂದ್ರ ಟಾಕೀಸ್ ರಸ್ತೆ, ಅಂಗಡಿ ಮಾರಪ್ಪ ಕಾಂಪೌಂಡ್ ಮಾರ್ಗವಾಗಿ ಸಂಚರಿಸಿತು.
ಸಂಘದ ಸಮವಸ್ತ್ರ ಧರಿಸಿದ ಸಾವಿರಾರು ಜನರು ಎಡಗೈನಲ್ಲಿ ಲಾಠಿ ಹಿಡಿದು ಶಿಸ್ತಿನಿಂದ ಹೆಜ್ಜೆ ಹಾಕುತ್ತ ಹೊರಟರು. ಮೆರವಣಿಗೆಯುದ್ದಕ್ಕೂ ಗಣ ವೇಷಧಾರಿಗಳಿಗೆ ಪುಷ್ಪಚೆಲ್ಲಿ ಗೌರವ ಅರ್ಪಿಸಲಾಯಿತು.
ಯುವಕರು, ಹಿರಿಯರು ಚಿಕ್ಕ ಮಕ್ಕಳೂ ಸಹ ಉತ್ಸಾಹದಿಂದ ಪಥಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು. ಪಥಸಂಚಲನಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಬಿಜೆಪಿ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಸೇರಿದಂತೆ ಇತರ ಬಿಜೆಪಿ ನಾಯಕರು ಭಾಗವಹಿಸಿದ್ದರು.