ಜಿಲ್ಲೆ

ಬಾಳಿಕಾಯಿ ಅವರ ಕಾರ್ಯ ಸ್ಮರಣೀಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಲಾ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಎಂ.ಆರ್​. ಬಾಳಿಕಾಯಿ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ ಸದಸ್ಯ ಡಾ. ಸಂಜೀಕುಮಾರ ಹೇಳಿದರು.

ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಎಂ.ಆರ್​. ಬಾಳಿಕಾಯಿ ಅಭಿನಂದನಾ ಸಮಾರಂಭದಲ್ಲಿ ಮಾನಸ್ತಂಭ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಭಿನಂದನೆ ಗ್ರಂಥವಾಗಿ ಬಿಡುಗಡೆಯಾದ ಮಾನಸ್ತಂಭವು ಅಭಿನಂದನೆಗೆ ಸೀಮಿತವಾಗಿಲ್ಲ. ಆ ಗ್ರಂಥದಲ್ಲಿ ಎಂ.ಆರ್​. ಬಾಳಿಕಾಯಿ ಅವರ ಜೀವನ ಚರಿತ್ರೆ ಸಿಗಲಿದೆ. ಅವರ ಕಲೆ, ಸಾಧನೆ, ಜೀವನದಲ್ಲಿ ಪಟ್ಟ ಕಷ್ಟ, ಪ್ರಶಸ್ತಿಗಳು, ಹೀಗೆ ಇಡೀ ಜೀವನದ ಚಿತ್ರಣ ಸಿಗಲಿದೆ. ಹೀಗಾಗಿ ಈ ಗ್ರಂಥ ಯುವಕರಿಗೆ ಸಹಕಾರಿಯಾಗಿದೆ ಎಂದರು.

ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅವರು ವೈವಿಧ್ಯಮಯ ರೇಖಾ ಚಿತ್ರಗಳು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಎಂ.ಆರ್​. ಬಾಳಿಕಾಯಿ ಅವರು ಕಲೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದರೂ, ಯಾವುದೇ ಅಹಂ ಇಲ್ಲದೆ ಅತ್ಯಂತ ಸರಳವಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಈ ಮನೋಭಾವವೇ ಅವರು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ರೇಖಾ ಚಿತ್ರದ ಸಂರ್ಪೂಣ ಮಾಹಿತಿ ಈ ಪುಸ್ತಕದಲ್ಲಿ ಸಿಗಲಿದೆ. ಬಾಳಿಕಾಯಿ ಅವರಿಂದ ಇನ್ನೂ ಹೆಚ್ಚಿನ ಸೇವೆ ಸಿಗಲಿ ಎಂದರು.

ಅಭಿನಂದನಾ ಗ್ರಂಥ ಕುರಿತು ನರಸಿಂಹ ಪರಾಂಜಪೆ ಮಾತನಾಡಿದರು. ರಿತು ಕಕ್ಕರ್​, ವಿ.ಟಿ. ಕಾಳೆ ಮಾತನಾಡಿದರು. ನಿಡಸೋಸಿಯ ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ದ ಸಂಸ್ಥಾನಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಜೆ.ಎಚ್​. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಎಂ.ಆರ್​. ಬಾಳಿಕಾಯಿ, ಡಾ. ಆರ್​.ಎ. ಬಾಳಿಕಾಯಿ, ದೇವಗೌಡ ಮಲಗೌಡನವರ, ಬಾಳಿಕಾಯಿ ಕುಟುಂಬಸ್ಥರು, ಶಿಷ್ಯಂದಿರುವ, ಇತರರು ಇದ್ದರು. ಎಸ್​.ಕೆ. ಪತ್ತಾರ ಸ್ವಾಗತಿಸಿದರು. ಬಸವರಾಜ ಕುರಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು.