ಹುಬ್ಬಳ್ಳಿ: ಇಲ್ಲಿಯ ಗುರುನಾನಕ ಮಿಶನ್ ಟ್ರಸ್ಟ್ ಮತ್ತು ಸದ್ಭಾವ ವೇದಿಕೆ ವತಿಯಿಂದ ಡಿ. 28ರಂದು ಬೆಳಗ್ಗೆ 10ಕ್ಕೆ ದೇಶಪಾಂಡೆ ನಗರದ ಗುರುದ್ವಾರ ಶ್ರೀ ಗುರುಸಿಂಗ ಸಭಾದಲ್ಲಿ ಬಲಿದಾನ ದಿವಸ ಏರ್ಪಡಿಸಲಾಗಿದೆ.
ಗ್ಯಾನಿ ಗುರವಂತಸಿಂಗ್ ಕೀರ್ತನ ಮಾಡುವರು. ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ ಅವರು ಬೌದ್ಧಿಕ ನಡೆಸುವರು.
ಸದ್ಭಾವ ವೇದಿಕೆಯ ಸಂಯೋಜಕ ಮಹಾದೇವ ಕರಮರಿ, ಸಹ ಸಂಯೋಜಕ ಶಂಕ್ರಣ್ಣ ಮುನವಳ್ಳಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.