ಚಳ್ಳಕೆರೆ: ತಾಲೂಕಿನ ಬಾಲೇನಹಳ್ಳಿ ಗ್ರಾಮದಲ್ಲಿ ಅಧಿಕ ಶ್ರಾವಣಮಾಸ ಅಂಗವಾಗಿ ಶನಿವಾರ ಗ್ರಾಮದ ಆಂಜನೇಯ ಸ್ವಾಮಿಗೆ 101 ಎಡೆ ಸಮರ್ಪಿಸುವ ಪೂಜಾ ಕಾರ್ಯಕ್ರಮ ನಡೆಯಿತು.
ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಯುವ ಸಮುದಾಯ ಜವಾಬ್ದಾರಿ ಹೊತ್ತುಕೊಂಡು ಪೂಜಾ ಕಾರ್ಯ ನೆರವೇರಿಸಿರುವುದು ಮಾದರಿ ಆಗಿದೆ ಎಂದರು.
ಹಳ್ಳಿಗಳಲ್ಲಿನ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಗೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಬೇಕು. ಇದರಲ್ಲಿ ಲೋಕ ಕಲ್ಯಾಣ ಮನೋಭಾವನೆ ಬೆಸೆಯುವ ಸಂಬಂಧ ವೃದ್ಧಿಸುತ್ತದೆ ಎಂದು ಹೇಳಿದರು.
ಅರ್ಚಕ ಡಾ.ಅನಂತರಾಮ್ ಗೌತಮ್, ಬಿ.ಸಿ. ಜಯಪ್ರಕಾಶ್, ಬಿ.ವಿ. ಸುಬ್ರಹ್ಮಣ್ಯ, ಮುರುಳಿಕೃಷ್ಣ ಮತ್ತು ನಾಗೇಶ್, ಭಾರಧ್ವಜ್,
ಗ್ರಾಪಂ ಸದಸ್ಯ ಒ.ಟಿ.ರಾಜೇಶ್, ಶಿಲ್ಪಾ ವೆಂಕಟೇಶ್, ಜ್ಯೋತಿ ಸತೀಶ್, ಪಿ.ಟಿ. ಪ್ರಶಾಂತ್‌ಕುಮಾರ್, ಒ.ಟಿ. ತಿಪ್ಪೇಸ್ವಾಮಿ, ಜಯಶೀಲರೆಡ್ಡಿ,
ಕೆ.ಪಿ. ಸುದರ್ಶನರೆಡ್ಡಿ, ಬುಡೇನ್‌ಸಾಬ್, ಆರ್.ಟಿ.ಹೇಮಣ್ಣ, ತಳವಾರ್ ಶಂಕ್ರಿ, ಆರ್.ಟಿ.ಭೀಮರಾಜ್ ಇದ್ದರು.