ರಾಯಚೂರಿನಲ್ಲಿ ಜರುಗುತ್ತಿರುವ ಶರನ್ನವರಾತ್ರಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ರಂಬಾುರಿ ಜಗದ್ಗುರುಗಳನ್ನು ಗದಗ ನಗರದಲ್ಲಿ ಗೌರವಪೂರ್ವಕವಾಗಿ ಬಿಳ್ಕೊಡಲಾಯಿತು. ಡಿ. ಆರ್​. ಪಾಟೀಲ, ಈಶಣ್ಣ ಮುನವಳ್ಳಿ, ಚಂದ್ರು ಬಾಳಿಹಳ್ಳಿಮಠ ಇತರರು ಇದ್ದರು. 
ಜಿಲ್ಲೆ

ಬಾಳೆಹೊನ್ನೂರು ಶ್ರೀಮದ್​ ರಂಭಾಪುರಿ ಜಗದ್ಗುರುಗಳಿಗೆ ಗೌರವ ಸಮರ್ಪಣೆ

Gadag - Shivanand Hiremath

ಗದಗ: ರಾಯಚೂರು ಜಿಲ್ಲೆಯ ಲಿಂಗಸುಗೂರು ನಗರದಲ್ಲಿ ಅ. 15 ರಿಂದ 24ರವರೆಗೆ ನಡೆಯಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಗದಗ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಬಾಳೆಹೊನ್ನೂರು ಶ್ರೀಮದ್​ ರಂಭಾಪುರಿ ವೀರಸಿಂಹಾಸನಾಧೀಶ್ವರ ಜ.ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅವರನ್ನು ಗದುಗಿನ ಭಕ್ತಾಧಿಗಳು ಗೌರವ ಸಮರ್ಪಣೆಗೈದು ಭಕ್ತಿಯಿಂದ ಬಿಳ್ಕೋಟ್ಟರು.
ಶುಕ್ರವಾರ ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್​.ಪಾಟೀಲ ಅವರು ಭಕ್ತರ ಪರವಾಗಿ ಗುರು ವಂದನೆ ಸಲ್ಲಿಸಿ ಮಾತನಾಡಿ, ಬಹು ವರ್ಷಗಳ ಹಿಂದೆ ಗದುಗಿನಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ವೈಭವದೊಂದಿಗೆ ಆಚರಿಸಲಾಗಿದೆ. ಅಂತಹ ದಸರಾ ಧರ್ಮ ಸಮ್ಮೇಳನ ಗದುಗಿನಲ್ಲಿ ಮುಂಬರುವ ವರ್ಷಗಳಲ್ಲಿ ನಡೆಯುವಂತಾಗಬೇಕು. ಕಾರ್ಯಕ್ರಮ ನಡೆಸಲು ಜಗದ್ಗುರುಗಳು ಅಪ್ಪಣೆ ನೀಡಬೇಕೆಂದು ಡಿ.ಆರ್​.ಪಾಟೀಲ ಮನವಿ ಮಾಡಿಕೊಂಡರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯ ಈಶಣ್ಣ ಮುನವಳ್ಳಿ ಅವರು ಮಾತನಾಡಿ ಪೂಜ್ಯರಿಂದ ನಡೆಯಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಮ್ಮೆಲ್ಲರಿಗೆ ಹಿತೋಪದೇಶ, ಸನ್ಮಾರ್ಗ ನೀಡುವಂತಾಗಲಿ ಎಂದರು.
ಚಂದ್ರು ಬಾಳಿಹಳ್ಳಿಮಠ, ಅಜ್ಜಣ್ಣ ಮಲ್ಲಾಡದ, ಮಹೇಶಚಂದ್ರ ಕಬಾಡರ, ಅನೀಲ ಅಬ್ಬಿಗೇರಿ, ವೀರೇಶ ಕೂಗು, ರಾಜಣ್ಣ ಗುಡಿಮನಿ, ಮಹಾದೇವಯ್ಯ ಧನ್ನೂರಹಿರೇಮಠ, ಉಮಾಪತಿ ಭೂಸನೂರಮಠ, ಪ್ರಕಾಶ ಬೇಲಿ, ಮಹೇಶ ಶಾಬಾದಿಮಠ, ನಾಗೇಶ ಹುಬ್ಬಳ್ಳಿ, ಅಶೋಕ ಪಾಟೀಲ, ಮಂಜುನಾಥ ಚನ್ನಪ್ಪನವರ, ತಾತನಗೌಡ ಪಾಟೀಲ, ಶಿವಯ್ಯ ನಾಲತ್ವಾಡಮಠ, ಮಲ್ಲಿಕಾರ್ಜುನ ಶಿಗ್ಲಿ ಹಲವರು ಇದ್ದರು.