ಜಿಲ್ಲೆ

30ರಿಂದ ಬಳಂಜ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ನಡ್ಡಂತಾಡಿ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿ ನೇತೃತ್ವದಲ್ಲಿ ಮಾ.30ರಿಂದ ಏ.6ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀ ಪಂಚಲಿಂಗೇಶ್ವರ ದೇಗುಲದ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್ ತಿಳಿಸಿದ್ದಾರೆ.

30ರಂದು ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಸಮರ್ಪಣೆ, ತೋರಣ ಮುಹೂರ್ತ, ಅನ್ನಸಂತರ್ಪಣೆ, ನಿತ್ಯಬಲಿ ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ ಜರುಗಲಿದೆ. 31ರಂದು ಉತ್ಸವ, ಮಹಾಪೂಜೆ, ನಿತ್ಯಬಲಿ ಜರುಗಲಿದೆ. 1ರಂದು ಸ್ವಸ್ತಿ ಪುಣ್ಯಾಹವಾಚನ, ಕಲಶಾರಾಧನೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಉತ್ಸವ, ಮಹಾಪೂಜೆ, ನಿತ್ಯಬಲಿ ನಡೆಯಲಿದೆ.

2ರಂದು ಕಲಶಾರಾಧನೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಉತ್ಸವ, ಮಹಾಪೂಜೆ, ನಿತ್ಯ ಬಲಿ ನಡೆಯಲಿದೆ. 3ರಂದು ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಬಳಂಜ ಶ್ರೀ ಪಂಚಶ್ರೀ ಮಕ್ಕಳ ಕುಣಿತ ಭಜನಾ ಮಂಡಳಿ ಹಾಗೂ ಬಳಂಜ ನಾಲ್ಕೂರು ಪಂಚಶ್ರೀ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ. ರಾತ್ರಿ ಉತ್ಸವ ಬಲಿ, ದರ್ಶನಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವಸಂತಕಟ್ಟೆ ಪೂಜೆ, ಮಹಾಪೂಜೆ, ನಿತ್ಯಬಲಿ ಜರುಗಲಿದೆ. 4ರಂದು ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ವಸಂತಕಟ್ಟೆ ಪೂಜೆ, ಮಹಾಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ, ಕವಾಟಬಂಧನ ನಡೆಯಲಿದೆ.

ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ

ಏ.5ರಂದು ‘ದಿವ್ಯದರ್ಶನ’ ದಶವಿಧ ಸ್ನಾನ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಅಲಂಕಾರಪೂಜೆ, ಮಹಾಪೂಜೆ, ಚೂರ್ಣೋತ್ಸವ, ಪಲ್ಲಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಕಾರ್ಯಾಣ ಸ್ವಾತಿ ಮ್ಯೂಸಿಕಲ್ಸ್ ಅವರಿಂದ ಹರಿನಾಮ ಸಂಕೀರ್ತನೆ, ಬೊಳ್ಳಾಜೆ ಬ್ರಹ್ಮಶ್ರೀ ಭಜನಾ ಮಂಡಳಿಯವರಿಂದ ಭಜನಾ ಸೇವೆ, ರಾತ್ರಿ ಬಳಂಜ ಗುತ್ತುವಿನಿಂದ ದೈವಗಳ ಭಂಡಾರ ಬರುವುದು. ಉತ್ಸವ ಬಲಿ, ವಸಂತಕಟ್ಟೆ ಪೂಜೆ, ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವ ಮತ್ತು ದೇವರ ಭೇಟಿ, ಶ್ರೀ ದೇವರ ಅವಭೃತ, ಧ್ವಜಾವರೋಹಣ, ಮಹಾಪೂಜೆ ನಡೆಯಲಿದೆ. ಬಳಂಜ ಶ್ರೀ ಪಂಚಲಿಂಗೇಶ್ವರ ಹವ್ಯಾಸಿ ಯಕ್ಷಗಾನ ತರಬೇತಿ ಕೇಂದ್ರದವರಿಂದ ಯಕ್ಷಗಾನ ಬಯಲಾಟ, ಕಾರ್ಕಳ ಡೆನ್ನಾನ ಕಲಾವಿದೆರ್‌ನಿಂದ ಹಾಸ್ಯ ನಾಟಕ ನಡೆಯಲಿದೆ. 6ರಂದು ಮಹಾಪೂಜೆ, ಮಹಾಮಂತ್ರಾಕ್ಷತೆ, ರಾತ್ರಿ ಹಂದ್ಲಾಯಿ ದೈವಸ್ಥಾನದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ.