ಬೆಳಗಾವಿ: ಸರ್ಕಾರವು ಡಾ.ಡಿ.ಎಂ.ನಂಜುಂಡಪ್ಪ ವರದಿ 2007-08ರಿಂದ ಜಾರಿಗೊಳಿಸಿದೆ. ಈಗಿನ ಕಾಲಕ್ಕೆ ಅನುಗುಣವಾಗಿ ಸದ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಆಧರಿಸಿ ಈ ವರದಿಯ ಪುನರ್ ವಿಮರ್ಶೆ ಮಾಡುವುದರ ಜತೆಗೆ ಹೊಸ ಮಾರ್ಗಸೂಚಿ ಅಥವಾ ಶಿಾರಸುಗಳ ಅಗತ್ಯವಿದೆ. ಆದ್ದರಿಂದ ಸಮಿತಿಯು 40-50 ಸೂಚ್ಯಂಕಗಳನ್ನು ಪಟ್ಟಿ ಮಾಡಿಕೊಂಡಿದ್ದು, ಅವುಗಳ ಆಧಾರದ ಮೇಲೆ ವಿಸ್ತೃತ ಅಧ್ಯಯನ ಕೈಗೊಂಡು ಅಗತ್ಯ ಕ್ರಮಗಳನ್ನು ಸರ್ಕಾರಕ್ಕೆ ಶಿಾರಸು ಮಾಡಲಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ. ಎಂ.ಗೋವಿಂದರಾವ್ ಹೇಳಿದರು.
ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಗುರುವಾರ ಜರುಗಿದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸಂವಾದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ನಾಲ್ಕು ವಿಭಾಗಗಳಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಗಳಿಂದ ಸಲಹೆ, ಅಭಿಪ್ರಾಯ ಆಲಿಸಲಾಗುತ್ತಿದೆ. ಡಾ.ನಂಜುಂಡಪ್ಪ 2002ಕ್ಕೆ ವರದಿ ಸಲ್ಲಿಸಿರುತ್ತಾರೆ. ಅವರ ವರದಿಯು 35 ಸೂಚ್ಯಂಕಗಳ ಆಧಾರದಲ್ಲಿ ರಚಿಸಲಾಗಿದೆ. ಅತ್ಯಂತ ಹಿಂದುಳಿದ, ಹಿಂದುಳಿದ ತಾಲೂಕುಗಳೆಂದು ವರ್ಗೀಕರಿಸಿದ್ದರು. 31 ಸಾವಿರ ಕೋಟಿ ಮೂಲ ಸೌಕರ್ಯಗಳಿಗೆ ಖರ್ಚು ಮಾಡಬೇಕು ಎಂದು ವರದಿಯಲ್ಲಿ ತಿಳಿಸಿದ್ದರು. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ತಲಾ ಆದಾಯ ರಾಜ್ಯದ ಒಟ್ಟಾರೆ ತಲಾ ಆದಾಯಕ್ಕಿಂತ ಹೆಚ್ಚಿದೆ. ಉಳಿದ ಜಿಲ್ಲೆಗಳ ಕೊಡುಗೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ನೀರಾವರಿಗೆ ಶೇ.25 ಹಾಗೂ ಗ್ರಾಮೀಣಾಭಿವೃದ್ಧಿಗೆ ಶೇ.21 ಖರ್ಚಾಗುತ್ತಿದೆ. ಉಳಿದ ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ನೀಡಬೇಕಿದೆ. ಕೃಷಿ ಆದಾಯ ಈಗ ಶೇ.9ರಷ್ಟಿದೆ. ಕೈಗಾರಿಕೆ, ಉತ್ಪಾದನೆ ಮತ್ತಿತರ ಕ್ಷೇತ್ರಗಳಿಂದ ಉತ್ತಮ ಆದಾಯ ಬರುತ್ತಿದೆ. ಶೇ.9 ಆದಾಯ ಪ್ರಮಾಣವಿರುವ ಕ್ಷೇತ್ರದಲ್ಲಿ ಶೇ.41 ಜನರು ಕೆಲಸ ಮಾಡುತ್ತಿದ್ದಾರೆ. ಈ ಅಸಮತೋಲನ ನಿವಾರಿಸಬೇಕಿದೆ ಎಂದರು.
ಅಕಾರಿಗಳ ಪಾತ್ರ ಮಹತ್ವದ್ದು: ಸಮಿತಿಯ ಸದಸ್ಯ ಕಾರ್ಯದರ್ಶಿ ವಿಶಾಲ್ ಆರ್. ಮಾತನಾಡಿ, ಸರ್ಕಾರದಿಂದ ಅನುದಾನ ಘೋಷಣೆ ಜತೆಗೆ ಖಾಸಗಿ ವಲಯಗಳಾದ ಕೈಗಾರಿಕೆ, ಆಹಾರ ಸಂಸ್ಕರಣೆ ಮತ್ತಿತರ ಕ್ಷೇತ್ರಗಳಿಗೆ ಯಾವ ರೀತಿಯ ಉತ್ತೇಜನ ನೀಡಬೇಕು ಎಂಬುದನ್ನು ಅರಿತುಕೊಂಡು ಆ ಅಂಶಗಳನ್ನು ವರದಿಯಲ್ಲಿ ಅಳವಡಿಸಲಾಗುವುದು. ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು. ಸರ್ಕಾರದ ಯೋಜನೆ ತ್ವರಿತಗತಿಯಲ್ಲಿ ಜಾರಿಗೆ ತರುವಲ್ಲಿ ಅಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಉದ್ಯೋಗಾಧಾರಿತ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ಸರ್ಕಾರಿ ಶಾಲೆ-ಕಾಲೇಜುಗಳ ಗುಣಮಟ್ಟ ಖಾಸಗಿ ಮಾದರಿಯಲ್ಲಿ ಒದಗಿಸಬೇಕಿದೆ ಎಂದರು.
ಸಮಪರ್ಕ ಅನುಷ್ಠಾನವಾಗಲಿ: ಸಮಿತಿ ಸದಸ್ಯ ಸೂರ್ಯನಾರಾಯಣ ಮಾತನಾಡಿ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಬಳಕೆ ಮತ್ತಿತರ ಕ್ಷೇತ್ರಗಳಲ್ಲಿ ಕೆಲವು ಜಿಲ್ಲೆಗಳು ಹಿಂದೆ ಇರುವುದಕ್ಕಿಂತಲೂ ಅಧೋಗತಿಗೆ ಇಳಿದಿವೆ. ಇಂತಹ ವಿಷಯಗಳ ಮೇಲೆ ಬೆಳಕು ಚೆಲ್ಲುವ ಅಗತ್ಯವಿದೆ. ಕೇವಲ ಮೂಲಸೌಕರ್ಯ ಒದಗಿಸಿದರೆ ಸಾಲದು, ಸಮರ್ಪಕ ಅನುಷ್ಠಾನ ಮಾಡಬೇಕಿದೆ ಎಂದು ಸೂಚಿಸಿದರು. ಜಿಲ್ಲಾಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಭೀಮಾಶಂಕರ ಗುಳೇದ, ಸಮಿತಿಯ ಇನ್ನೋರ್ವ ಸದಸ್ಯ ಎಸ್.ಡಿ.ಬಾಗಲಕೋಟೆ ಮಾತನಾಡಿದರು. ಜಿಪಂ ಸಿಇಒ ರಾಹುಲ್ ಶಿಂಧೆ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಕೃಷಿ ತಜ್ಞರು, ವಿವಿಧ ಸಂಘ-ಸಂಸ್ಥೆಯವರು ಹಾಗೂ ಅಕಾರಿಗಳು ಸಲಹೆಗಳನ್ನು ನೀಡಿದರು. ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಹೊರತು ಮತ್ತಿತರ ಶಾಸಕರು ಸಭೆಗೆ ಗೈರಾಗಿದ್ದರು. 7 ಜಿಲ್ಲೆ ಜನಪ್ರತಿನಿಗಳಿಗೂ ಸಭೆಗೆ ಆಹ್ವಾನ ನೀಡಲಾಗಿತ್ತು.
ಬೆಳಗಾವಿಯ ೌಂಡ್ರಿ ಕ್ಲಸ್ಟರ್ ಇನ್ನಷ್ಟು ಉತ್ತೇಜನ ನೀಡಲು ಅನುಕೂಲವಾಗುವಂತೆ ರಕ್ಷಣಾ ವಲಯದ ಉತ್ಪಾದನಾ ಘಟಕ, ಸಾರ್ವಜನಿಕ ಉದ್ಯಮ ಮತ್ತು ತಾಂತ್ರಿಕ ಶಿಕ್ಷಣ ಕೇಂದ್ರ ಸ್ಥಾಪಿಸುವ ಅಗತ್ಯವಿದೆ ಎಂದು ಆನಂದ ದೇಸಾಯಿ ತಿಳಿಸಿದರು. ಹೋಟೆಲ್ ಉದ್ಯಮ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅಜಯ್ ಪೈ ಸಲಹೆ ನೀಡಿದರು. ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ ದಕ್ಷಿಣ ಕರ್ನಾಟಕದ ಸಮಗ್ರ ಅಭಿವೃ್ದಯಂತೆ ಆಡಳಿತಾತ್ಮಕ ಅಭಿವೃದ್ಧಿ ಉತ್ತರ ಕರ್ನಾಟಕದಲ್ಲಿಯೂ ಆಗಬೇಕು ಎಂದರು.
ಸಮಿತಿಯು ಅಸಮತೋಲನ ನಿವಾರಣೆಗೆ ರಾಜ್ಯದಲ್ಲಿ ಒಟ್ಟಾರೆ 31 ಸಾವಿರ ಕೋಟಿ ರೂ. ವಿನಿಯೋಗಿಸಲು ಶಿಾರಸು ಮಾಡಿತ್ತು. ಆ ಪ್ರಕಾರ ರಾಜ್ಯ ಸರ್ಕಾರವು 2007-08ರಲ್ಲಿ ಸಮಿತಿ ಶಿಾರಸುಗಳ ಅನುಷ್ಠಾನಕ್ಕೆ ಮುಂದಾಯಿತು. ಆದರೆ ನಂತರ ನಡೆದ ಅಧ್ಯಯನ ಪ್ರಕಾರ ಅಸಮತೋಲನ ನಿವಾರಣೆ ಸಮರ್ಪಕವಾಗಿಲ್ಲ ಎಂಬುದು ಕಂಡುಬಂತು. ನಂಜುಂಡಪ್ಪ ಸಮಿತಿ ಸೂಚ್ಯಂಕಗಳಲ್ಲಿ ಬದಲಾವಣೆ ಅಗತ್ಯ ಕಂಡುಬಂದಿರುವುದರಿಂದ ಹೊಸದಾಗಿ ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಮಿತಿಯ ನಿರ್ದೇಶಕ ಡಿ.ಚಂದ್ರಶೇಖರಯ್ಯ ಹೇಳಿದರು.
ಸಮಿತಿಯು ಅಸಮತೋಲನ ನಿವಾರಣೆಗೆ ರಾಜ್ಯದಲ್ಲಿ ಒಟ್ಟಾರೆ 31 ಸಾವಿರ ಕೋಟಿ ರೂ. ವಿನಿಯೋಗಿಸಲು ಶಿಾರಸು ಮಾಡಿತ್ತು. ಆ ಪ್ರಕಾರ ರಾಜ್ಯ ಸರ್ಕಾರವು 2007-08ರಲ್ಲಿ ಸಮಿತಿ ಶಿಾರಸುಗಳ ಅನುಷ್ಠಾನಕ್ಕೆ ಮುಂದಾಯಿತು. ಆದರೆ ನಂತರ ನಡೆದ ಅಧ್ಯಯನ ಪ್ರಕಾರ ಅಸಮತೋಲನ ನಿವಾರಣೆ ಸಮರ್ಪಕವಾಗಿಲ್ಲ ಎಂಬುದು ಕಂಡುಬಂತು. ನಂಜುಂಡಪ್ಪ ಸಮಿತಿ ಸೂಚ್ಯಂಕಗಳಲ್ಲಿ ಬದಲಾವಣೆ ಅಗತ್ಯ ಕಂಡುಬಂದಿರುವುದರಿಂದ ಹೊಸದಾಗಿ ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಮಿತಿಯ ನಿರ್ದೇಶಕ ಡಿ.ಚಂದ್ರಶೇಖರಯ್ಯ ಹೇಳಿದರು.