ಜಿಲ್ಲೆ

ನಾ.ಡಿಸೋಜ ಕಾದಂಬರಿಗಳಲ್ಲಿ ಅಭಿವೃದ್ಧಿ&ಪರಿಸರ ನಡುವೆ ಸಮತೋಲನ

Avinash R

ಉಳ್ಳಾಲ: ನಾ.ಡಿಸೋಜ ಅವರು ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯ ಪ್ರತಿಪಾದಿಸಿದ ಕನ್ನಡದ ಲೇಖಕ. ಅವರ ಕಾದಂಬರಿಗಳಲ್ಲಿ ಪ್ರಕೃತಿ ವಿನಾಶದ ದುಷ್ಪರಿಣಾಮಗಳ ಕುರಿತು ಹಾಗೂ ಅಭಿವೃದ್ಧಿಯ ಅಮಾನವೀಯ ಮುಖ ಅನಾವರಣಗೊಂಡಿದೆ ಎಂದು ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಹೇಳಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಂಗಳೂರು ವಿವಿ ವತಿಯಿಂದ ವಿವಿಯ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ನಾ.ಡಿಸೋಜ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್​ ಪುಷ್ಪನಮನ ಸಲ್ಲಿಸಿದರು. ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್​, ತಾಲೂಕು ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ, ತಹಸೀಲ್ದಾರ್​ ಪುಟ್ಟರಾಜು, ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್​, ೇತ್ರ ಶಿಕ್ಷಣಾಧಿಕಾರಿ ಎಚ್​.ಆರ್​.ಈಶ್ವರ್​, ಕೊಣಾಜೆ ಗ್ರಾಪಂ ಅಧ್ಯೆ ಗೀತಾ ಡಿ.ಕುಂದರ್​, ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ, ಉಳ್ಳಾಲ ತಾಲೂಕು ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್​, ಸಂಟನಾ ಕಾರ್ಯದರ್ಶಿ ಚಂದ್ರಹಾಸ್​ ಶೆಟ್ಟಿ ದೇರಳಕಟ್ಟೆ, ಪುಷ್ಪರಾಜ್​ ಮಂಗಳೂರು, ಮಂಜುನಾಥ್​ ರೇವಣ್ಕರ್​, ವಿಜಯಲಕ್ಷಿ$್ಮ ರೈ ಕಲ್ಲಿಮಾರ್​ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಸಂಟನಾ ಕಾರ್ಯದರ್ಶಿ ತ್ಯಾಗಂ ಹರೇಕಳ ನಿರೂಪಿಸಿದರು.

ಅಭಿವೃದ್ಧಿ ಮಾದರಿಗಳು ಭಿನ್ನ ಇರಬಹುದು. ಶರಾವತಿಯಲ್ಲಿ ಮುಳುಗಡೆ, ರಸ್ತೆ ವಿಸ್ತರಣೆ, ವಿಮಾನ ನಿಲ್ದಾಣದಿಂದ ಹೀಗೆ ಬೇರೆ ಬೇರೆ ಕಾರಣಗಳಿಂದ ಮನೆ, ಜಾಗ ಕಳೆದುಕೊಂಡು ವಲಸೆ ಹೋಗಬೇಕಾದವರ ಭಾವನೆಗಳು, ಸಂಕಟಗಳು ಸಮಾನ. ಬರಹಗಾರರು ಇಂತಹ ನೋವಿಗೆ ಮಿಡಿಯುತ್ತಾರೆ. ನಾ.ಡಿಸೋಜರ ಬರಹದಲ್ಲಿ ನಾವದನ್ನು ಕಾಣಬಹುದು. - ರಾಜು ಮೊಗವೀರ, ಮಂಗಳೂರು ವಿವಿ ಕುಲಸಚಿವ