ಜಿಲ್ಲೆ

ಗುಂಡಿ ಬಿದ್ದ ಬಲಮುರಿ ಸಂಪರ್ಕ ರಸ್ತೆ

ರಾಜಣ್ಣ

ನಾಪೋಕ್ಲು: ಸಮೀಪದ ಬೇತು ಗ್ರಾಮದಿಂದ ಬಲಮುರಿಗೆ ಸಂಪರ್ಕ ಕಲ್ಪಿಸುವ ಬಳಿ ಬಿರುಸಿನ ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿದೆ, ರಸ್ತೆಯ ತಿರುವಿನಲ್ಲಿ ಮೋರಿ ಕುಸಿತಗೊಂಡಿದ್ದು ಸಂಚಾರ ದುಸ್ತರವಾಗಿದೆ.


ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇತ್ತೀಚೆಗಷ್ಟೇ ಮಕ್ಕಿಕಡು ಸೇತುವೆ ನಿರ್ಮಾಣದಿಂದಾಗಿ ನಾಪೋಕ್ಲುವಿನಿಂದ ಮೂರ್ನಾಡು, ಪಾರಾಣೆ, ವಿರಾಜಪೇಟೆ ಭಾಗಗಳಿಗೆ ತೆರಳುವವರಿಗೆ ಬಹಳ ಅನುಕೂಲವಾಗಿತ್ತು. ಸೇತುವೆಯ ಬಳಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ದೇವಾಲಯದಿಂದ ಸ್ವಲ್ಪ ಮುಂದಕ್ಕೆ ಇಳಿಜಾರಿನಲ್ಲಿ ಕಿರಿದಾದ ರಸ್ತೆ ಇದ್ದು ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿವೆ. ಡಾಂಬರು ಕಿತ್ತು ಹೋಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಕೂಡಲೇ ರಸ್ತೆ ಸರಿಪಡಿಸಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರ