ಜಿಲ್ಲೆ

ಬಾಲಲೋಚನ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ

ರಾಜಣ್ಣ

ಕೊಳ್ಳೇಗಾಲ: ತಾಲೂಕಿನ ಸರಗೂರು ಗ್ರಾಮದಲ್ಲಿರುವ ಬಾಲಲೋಚನ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತಾಯ ಚಾಲನೆ ನೀಡಿದರು.


ಬಿ.ಜಯರಾಮ ನೆಲ್ಲಿತಾಯ ಮಾತನಾಡಿ, ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಕೆರೆಗಳ ಅಭಿವೃದ್ಧಿಪಡಿಸುತ್ತಿದೆ. ಕೆರೆ, ಕಟ್ಟೆಗಳು ಅಭಿವೃದ್ಧಿಗೊಂಡರೆ ನೀರಿನ ಶೇಖರಣೆ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಶ್ರೀಕ್ಷೇತ್ರದಿಂದ ಬರುವ ಪ್ರಸಾದ ರೂಪದ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಪುಣ್ಯದ ಕೆಲಸ ಮಾಡುತ್ತಿದ್ದೇವೆ, ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.


ಕೆರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 3.46 ಲಕ್ಷ ರೂ. ಗ್ರಾಮಸ್ಥರ ಪಾಲು, ಹೂಳು ಸಾಗಣೆ ವೆಚ್ಚ 2.45 ಲಕ್ಷ ರೂ. ಸೇರಿ ಒಟ್ಟು 5.91ಲಕ್ಷ ರೂ.ಯೋಜನೆ ಇದಾಗಿದೆ ಎಂದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಚಾಮರಾಜನಗರ ಜಿಲ್ಲೆಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ಬಾಲಲೋಚನ ಕೆರೆ ಅಧ್ಯಕ್ಷ ಶಿವಶಂಕರ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ದಿನರಾಜ್‌ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ವಲಯ ಮೇಲ್ವಿಚಾರಕ ಚಂದನ್, ಗ್ರಾಮಸ್ಥರು ಹಾಗೂ ಮುಖಂಡರು ಇದ್ದರು.