ಕಾಸರಗೋಡು ಪೇಟೆ ಸ್ರೀ ವೆಂಕಟ್ರಮಣ ಬಾಲಗೋಕುಲ ವತಿಯಿಂದ ನಡೆದ ಕುಟುಂಬಸಂಗಮ ಕಾರ್ಯಕ್ರಮದಲ್ಲಿ ಮಕ್ಕಳು ತಾಯಂದಿರ ಪಾದಪೂಜೆ ನಡೆಸಿದರು. 
ಜಿಲ್ಲೆ

ಬಾಲಗೋಕುಲದಲ್ಲಿ ಕುಟುಂಬ ಸಂಗಮ

ಸೌಮ್ಯ ಆರ್

ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟ್ರಮಣ ಬಾಲಗೋಕುಲದ ಕುಟುಂಬ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ಬಾಲಗೋಕುಲ ಪ್ರಮುಖ್ ದೇವದಾಸ್ ನುಳ್ಳಿಪ್ಪಾಡಿ ಧ್ವಜಾರೋಹಣ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಕ್ಕಳಿಗೆ ಹಾಗೂ ತಾಯಂದಿರಿಗೆ ಭಾರತೀಯ ಸಂಸ್ಕೃತಿ, ಕುಟುಂಬ ಪದ್ಧತಿಯ ಬಗ್ಗೆ ಮಾಹಿತಿ ನೀಡಲಾಯಿತು. ಬಾಲಗೋಕುಲದ ಮಕ್ಕಳು ತಾಯಂದಿರಿಗೆ ಮಾತೃ ಪೂಜನಾ ವಿಶೇಷ ಕಾರ್ಯಕ್ರಮ ನೆರವೇರಿಸಿದರು. ತಾಯಂದಿರ ಪಾದಕ್ಕೆ ಪುಷ್ಪಾರ್ಚನೆಯೊಂದಿಗೆ ಪೂಜೆ ನಡೆಸಿ ನಮಿಸಿದರು.