ಮುಧೋಳ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಆರೀಫ್ ಮೋಮಿನ್, ನ್ಯಾಯವಾದಿ ಐ.ಎಚ್. ಅಂಬಿ ಇದ್ದರು. 
ಜಿಲ್ಲೆ

ಬಕ್ರೀದ್ ತ್ಯಾಗ, ಬಲಿದಾನದ ಪ್ರತೀಕ

ಮುಧೋಳ: ತ್ಯಾಗ, ಬಲಿದಾನ, ಸಹಿಷ್ಣುತೆ, ಸಾಮರಸ್ಯಗಳು ಬಕ್ರೀದ್ ಹಬ್ಬದ ಸಂದೇಶಗಳಾಗಿವೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಸ್ಲಿಮರು ಬಡವರಿಗೆ ದಾನ, ಧರ್ಮ ಮಾಡುವ ಮೂಲಕ ವಿಶೇಷವಾಗಿ ಬಕ್ರೀದ್ ಆಚರಿಸುತ್ತಾರೆ. ಈ ಹಬ್ಬ ಅವರಿಗೆ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದರು.

ಮೌಲ್ವಿ ಮೌಲಾನಾ ಇಕ್ಬಾಲಾ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಆರೀಫ್ ಮೋಮಿನ್, ನ್ಯಾಯವಾದಿ ಐ.ಎಚ್. ಅಂಬಿ, ಎನ್.ಡಿ. ಹುಬ್ಳಿಕರ, ಐ.ಎಚ್. ಅಂಬಿ, ಸಿದ್ದು ಸೂರ್ಯವಂಶಿ, ದಾನೇಶ ತಡಸಲೂರ, ಉದಯಸಿಂಗ್ ಪಡತಾರೆ, ಅಶೋಕ ಕಿವಡಿ, ಐ.ಎಚ್. ಸಾರವಾನ, ಮಿರ್ಜಾ ನಾಯಕವಾಡಿ, ಖಾಜಾ ಅಮೀನ್ ಭಾಗವಾನ, ಬಾದಶಹಾ ರಾಮದುರ್ಗ, ಬಿ.ಎಚ್. ಬೀಳಗಿ, ನಜೀರ್ ಪಠಾಣ ಇತರರಿದ್ದರು.