ಕೊಳ್ಳೇಗಾಲ ಪಟ್ಟಣದ ಮಸ್ಜಿದ್-ಎ- ಖುದ್ದೂಸಿಯ ಬಳಿ ಮುಸ್ಲಿಮರು ಜಮಾಯಿಸಿ ಮೆರವಣಿಗೆ ಮೂಲಕ ಈದ್ಗಾ ಮಸೀದಿ ಮುಂಭಾಗವಿರುವ ಪೂರ್ವಜರ ಸಮಾಧಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿದರು. 
ಜಿಲ್ಲೆ

ಕೊಳ್ಳೇಗಾಲದಲ್ಲಿ ಸಾಮೂಹಿಕ ಪ್ರಾರ್ಥನೆ

ನಾಗೇಶ ಎಸ್

ಕೊಳ್ಳೇಗಾಲ: ತ್ಯಾಗ, ಬಲಿದಾನ ಸಂಕೇತವಾದ ಬಕ್ರೀದ್‌ಹಬ್ಬವನ್ನು ಮುಸ್ಲಿಮರು ಸೋಮವಾರ ಭಕ್ತಿ-ಭಾವದಿಂದ ಆಚರಣೆ ಮಾಡಿದರು.

ಪಟ್ಟಣದ ಮಸ್ಜಿದ್-ಎ- ಖುದ್ದೂಸಿಯ ಬಳಿ ಜಮಾಯಿಸಿದ್ದ ಮುಸ್ಲಿಮರು ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತಲುಪಿ ಸಾಮೂಹಿಕವಾಗಿ ಪ್ರಾರ್ಥಿಸಿದರು. ಪ್ರಾರ್ಥನೆ ಬಳಿಕ ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ದಾನ ಧರ್ಮದ ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೆ ಸಹೋದರಂತೆ ಬಾಳುವಂತೆ ಕರೆ ನೀಡಿದರು. ನಂತರ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ತಮ್ಮ ತಮ್ಮ ಪೂರ್ವಜರ ಸಮಾಧಿಗೆ ಪುಷ್ಪ ಇಟ್ಟು ನಮನ ಸಲ್ಲಿಸಿದರು. ಈ ವೇಳೆ ಪಟ್ಟಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಿದ್ದರು.

ತಾಲೂಕಿನ ಮುಡಿಗುಂಡ, ಮುಳ್ಳೂರು, ಮಧುವನಹಳ್ಳಿ, ಹೊಂಡರಬಾಳು, ಉಗನಿಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬ ಆಚರಿಸಿದರು.