ಜಿಲ್ಲೆ

ಕಿಕ್ಕೇರಿಯಲ್ಲಿ ಸಡಗರದ ಬಕ್ರೀದ್

ಲಲಾಟಾಕ್ಷ ಎಸ್

ಕಿಕ್ಕೇರಿ: ಹೋಬಳಿ ಕೇಂದ್ರವಾದ ಕಿಕ್ಕೇರಿಯಲ್ಲಿ ಮುಸ್ಲಿಮರು ಸೋಮವಾರ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.


ಕೋಟೆ ಗಣಪತಿ, ಆಂಜನೇಯ ಬೀದಿ, ರಥಬೀದಿ, ಮಂದಗೆರೆ ರಸ್ತೆ ಮೂಲಕ ಮೆರವಣಿಗೆ ಸಾಗಿ ಗ್ರಾಮದ ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಫಕ್ರಿಯ ಆಲಂ ಕುರಾನ್ ಪಠಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲರೂ ಶಾಂತಿ, ನೆಮ್ಮದಿ, ದಾನ ಧರ್ವಕ್ಕೆ ಮುಂದಾಗಬೇಕು. ತ್ಯಾಗ, ಪ್ರೀತಿ, ಬಲಿದಾನದ ಸಂಕೇತವಾದ ಹಬ್ಬದಂದು ಬಡವರಿಗೆ ಸಾಧ್ಯವಾದಷ್ಟು ದಾನ ಮಾಡಬೇಕು. ಮಾನವೀಯತೆ ಮೆರೆಯಬೇಕು ಎಂದರು.


ಮಂದಗೆರೆ ಹಾಗೂ ಆನೆಗೊಳ ಗ್ರಾಮದಲ್ಲಿ ಸಮುದಾಯದವರು ಹಬ್ಬ ಆಚರಿಸಿದರು. ಸಿದ್ದಿಖ್, ಏಜಸ್ ಪಾಷ, ಯೂಸಫ್ ಖಾನ್, ಜಬ್ಬರ್‌ಖಾನ್, ಬಾಬು ಮತ್ತಿತರರಿದ್ದರು.