ಸಿದ್ದಾಪುರ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಬಕ್ರೀದ್ ಹಬ್ಬವನ್ನು ಕಂಡಕರೆಯಲ್ಲಿ ಮುಸ್ಲಿಂ ಸಮುದಾಯದವರು ಶನಿವಾರ ಸಂಭ್ರಮದಿಂದ ಆಚರಣೆ ಮಾಡಿದರು.
ಮಹಲ್ ಖತೀಬರಾದ ಅಬ್ದುಲ್ ಸಲಾಂ ಸಖಾಫಿ ನೇತೃತ್ವವದಲ್ಲಿ ಈದ್ ನಮಾಜ್ ಮಾಡಲಾಯಿತು. ಬಳಿಕ ಮರಣಹೊಂದಿದವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಹಲ್ ಕಮಿಟಿ ಅಧ್ಯಕ್ಷ ಆಲಿ ಮುಸ್ಲಿಯಾರ್ ಹಾಜಿ, ಪ್ರಧಾನ ಕಾರ್ಯದರ್ಶಿ ಸರ್ಫುದ್ದೀನ್, ಉಪಾಧ್ಯಕ್ಷ ಕೆ.ಎ. ಹುಸೈನ್,ಸಹ ಕಾರ್ಯದರ್ಶಿ ಅಬ್ದುಲ್ ಗಫೂರ್ ಇದ್ದರು.