ರೋಣ ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. 
ಜಿಲ್ಲೆ

ಬಕ್ರೀದ್ ಆಚರಣೆ, ಮನೆಗಳಲ್ಲಿ ವಿಶೇಷ ಭೋಜನ

ಸೋಮನಾಥ ರೆಡ್ಡಿ

ರೋಣ: ಪಟ್ಟಣದಲ್ಲಿ ಮುಸ್ಲಿಮರು ಸೋಮವಾರ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿ ಪರಸ್ಪರ ಶುಭಾಶಯ ಕೋರಿದರು.
ಹಬ್ಬದ ಅಂಗವಾಗಿ ಮನೆ ಮನೆಗಳಲ್ಲಿ ವಿಶೇಷ ಆಹಾರ ತಯಾರಿಸಿ ಬಂಧುಗಳೊಂದಿಗೆ ಸಾಮೂಹಿಕ ಭೋಜನ ಸವಿದರು.
ಪ್ರಾರ್ಥನೆ ವೇಳೆ ಪಿಎಸ್‌ಐ ಎಲ್.ಕೆ. ಜೊಲಕ್ಕಟಿ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಬಾವಸಾಬ ಬೆಟಗೇರಿ
ಶಬಿರ ಅಹ್ಮದ ಖಾಜಿ, ಇನಾಯತ್ ತರಫದಾರ, ಕಲಿಲ ರಾಮದುರ್ಗ, ಯೂಸುಫ್ ಇಟಗಿ, ಇಮಾಮ ಹುಸೇನ ದರಗಾದ, ಅಬು ಹೊಸೂರು ರಿಯಾಜ್, ಅಹ್ಮದ್ ಮುಲ್ಲಾ, ಮುಸ್ತಾಫ ಬೇಪಾರಿ, ಮುಸ್ತಾಕ ಅತ್ತಾರ, ಅಸ್ಲಾಂ ಕೊಪ್ಪಳ, ಮಲಿಕ್ ಕುರ್ತಕೋಟಿ, ಅಂಜುಮನ್ ಕಮಿಟಿ ಸದಸ್ಯರು ಇತರರಿದ್ದರು.