ಹುಬ್ಬಳ್ಳಿ: ತಾಲೂಕಿನ ಅಮರಗೋಳದಲ್ಲಿ ಬಕ್ರೀದ್ ಅಂಗವಾಗಿ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಮೃದ್ಧ ಮಳೆ ಬೆಳೆಗಾಗಿ ದೇವರಲ್ಲಿ ಬೇಡಿಕೊಂಡರು.
ರೈತರ ಕಷ್ಟಗಳನ್ನು ಪರಿಹರಿಸು, ಹಿಂದು ಮುಸ್ಲಿಂ ಬಾಂಧವರಲ್ಲಿ ಶಾಂತಿ ನೆಮ್ಮದಿ, ಸಹಬಾಳ್ವೆ, ಸಮಾನತೆ, ಸಹೋದರತ್ವ ಗಟ್ಟಿಗೊಳಿಸು ಎಂದು ಧರ್ಮಗುರು ಶೌಕತ್ ಅಲಿ ಮುಲ್ಲಾ ಪ್ರಾರ್ಥನೆ ಮಾಡಿದರು.
ಮುಸ್ಲಿಂ ಜಮಾತ ಅಧ್ಯಕ್ಷ ದಾದಾಪೀರ ದರ್ಗಾದ, ಮಾಬುಸಾಬ ನದಾಫ, ಖಾಸೀಮ ದರ್ಗಾದ, ನಜೀರ ಅಹ್ಮದ ಕೋಲಕಾರ, ಮಹ್ಮದ ರಫೀಕ ದರ್ಗಾದ, ಖಾದೀರಸಾಬ ದರ್ಗಾದ, ಅಬ್ಬಾಸಲಿ ಮುಲ್ಲಾ, ಹಜರತ ಅಲೀ ಮುಲ್ಲಾ, ಸೈಯದ ಗುಂಡೂರ. ರಾಜೇಸಾಬ ಮುಳ್ಳೂರ, ರಾಯಸಾಬ ದರ್ಗಾದ, ಬಾಬಾಜಾನ ಅರಳಿಕಟ್ಟಿ, ಬಾಬುಸಾಬ ಗುಂಡೂರ, ಮಹ್ಮದಸಾಬ ನದಾಫ್, ಬುಡ್ಡೆಸಾಬ ಕಲ್ಲೂರ, ಇಸಾಕ ದರ್ಗಾದ, ಮುಂತಾದವರು ಪಾಲ್ಗೊಂಡಿದ್ದರು.