ಅರಕಲಗೂಡಿನಲ್ಲಿ ಮುಸ್ಲಿಮರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  
ಜಿಲ್ಲೆ

ಅರಕಲಗೂಡಿನಲ್ಲಿ ಬಕ್ರೀದ್ ಆಚರಣೆ

ಲೋಕೇಶ್ ಮನು. ಡಿ

ಅರಕಲಗೂಡು: ಪಟ್ಟಣದಲ್ಲಿ ಮುಸ್ಲಿಮರು ಸೋಮವಾರ ಸಡಗರ ಸಂಭ್ರಮದಿಂದ ಬಕ್ರೀದ್ ಆಚರಿಸಿದರು.


ಪೇಟೆ ಮತ್ತು ಕೋಟೆ ಪ್ರದೇಶಗಳಿಂದ ಮೆರವಣಿಗೆಯಲ್ಲಿ ತೆರಳಿ ಹೊಳೆನರಸೀಪುರ ರಸ್ತೆ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಜಾಮಿಯಾ ಮಸೀದಿ ಧರ್ಮಗುರು ಹಫೀಜ್ ನಯಾಜುಲ್ಲಾ ಷರೀಪ್ ಧರ್ಮ ಸಂದೇಶ ನೀಡಿದರು.


ಬಳಿಕ ಪರಸ್ಪರ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು. ಶಾಸಕ ಎ.ಮಂಜು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಬಕ್ರೀದ್ ಶುಭಾಷಯ ಕೋರಿದರು.