ಜಿಲ್ಲೆ

ಅಗ್ನಿ ಅವಘಡ ಸುಟ್ಟು ಕರಕಲಾದ ಬೇಕರಿ

Gadag - Desk - Tippanna Avadoot

ಮುಂಡರಗಿ: ಪಟ್ಟಣದ ಬಸ್ ನಿಲ್ದಾಣದ ಎದುರಿನ ಅರಭಾವಿ- ಚಳ್ಳಕೇರಿ ಹೆದ್ದಾರಿಗೆ ಹೊಂದಿಕೊಂಡಿರುವ ನ್ಯೂ ಮಹಾಂತೇಶ ಬೇಕರಿಯಲ್ಲಿ ಶನಿವಾರ ಬೆಳಗಿನ ಜಾವ ಗಾಳಿ, ಮಳೆ ಸುರಿಯುವ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೇಕರಿ ಸಂಪೂರ್ಣ ಸುಟ್ಟು ಹೋಗಿದೆ.

ಅಗ್ನಿ ಅವಘಡದಿಂದ ಬೇಕರಿಯಲ್ಲಿದ್ದ ಹೀಟ್ ಆಂಡ್ ಕೋಲ್ಡ್​ನ 6 ಗ್ಲಾಸ್ ಕೌಂಟರ್, ಬ್ರೇಡ್ ಕಟ್ಟಿಂಗ್ ಮಶೀನ್, 3 ಫ್ರೀಜ್, ಪಪ್ಸ್ ಬಿಸಿ ಮಾಡುವ ಮೈಕ್ರೋ ಹೋನ್ ಹೀಗೆ ಹಲವಾರು ಪೀಠೋಪಕರಣ ಮತ್ತು ಲಕ್ಷಾಂತರ ರೂ. ಮೌಲ್ಯದ ಸಿಹಿ, ಬೇಕರಿ ಪದಾರ್ಥಗಳು ಸುಟ್ಟು ಹೋಗಿವೆ.  ಘಟನೆ ಸ್ಥಳಕ್ಕೆ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಭೇಟಿ ನೀಡಿ ಪರಿಶೀಲಿಸಿದರು.

ಗಾಳಿ ಮಳೆಯಿಂದಾಗಿ ಬೇಕರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಬೆಂಕಿ ಅವಘಡದಿಂದ ಬೇಕರಿ, ಇನ್ನಿತರ ಪದಾರ್ಥಗಳು ಮತ್ತು ಪೀಠೋಪಕರಣಗಳು ಸುಟ್ಟು ಹೋಗಿವೆ ಎಂದು ಬೇಕರಿ ಮಾಲೀಕ ಚಂದ್ರು ನಾವಿ ತಿಳಿಸಿದರು.