ಜಿಲ್ಲೆ

ಶಾರ್ಟ್‌ಸರ್ಕ್ಯೂಟ್‌ನಿಂದ ಬೇಕರಿ ಭಸ್ಮ

Mysuru - Desk - Ravikumar

ಹಾಸನ: ಅರಸೀಕೆರೆ ಗ್ರಾಮಾಂತರ ತಾಲೂಕಿನ ಬಾಣಾವರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 234 ಮಾರ್ಗದ ಹುಳಿಯಾರು ರಸ್ತೆಯಲ್ಲಿರುವ ಹಾಸನ್ ಅಯ್ಯಂಗಾರ್ ಬೇಕರಿಯಲ್ಲಿ ಶನಿವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸಂಪೂರ್ಣವಾಗಿ ಭಸ್ಮವಾಗಿದೆ.


ಈ ಅಗ್ನಿ ಅವಘಡದಿಂದ ಬೇಕರಿ ಪಕ್ಕದಲ್ಲಿದ್ದ ಸಿದ್ದಶ್ರೀ ಮೆಡಿಕಲ್ ಸ್ಟೋರ್ ಕೂಡ ಸಂಪೂರ್ಣವಾಗಿ ವಿದ್ಯುತ್ ವೈರ್ ಸುಟ್ಟುಹೋಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಯುಪಿಎಸ್ ಸಂಪರ್ಕದಲ್ಲಿ ವಿದ್ಯುತ್ ಪಡೆಯಲಾಗುತ್ತಿತ್ತು.

ಈ ಶಾರ್ಟ್‌ಸರ್ಕ್ಯೂಟ್‌ಜನಿಂದ ಬೇಕರಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಪದಾರ್ಥಗಳು, ಪಿಠೋಪಕರಣ ಭಸ್ನಮವಾಗಿವೆ.