ಬೈಲಹೊಂಗಲ: ಶತಮಾನ ಕಂಡ ಇಲ್ಲಿನ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ೂಷಿಸಲುರ್ನಿಣಯಿಸಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು.
ಅವರು ವಿಜಯವಾಣಿಯೊಂದಿಗೆ ಬುಧವಾರ ಮಾತನಾಡಿ, 2011ರ ಜನಗಣತಿ ಪ್ರಕಾರ 49,182 ಜನಸಂಖ್ಯೆ, 22.11 ಚಕಿಮೀ ವಿಸ್ತೀರ್ಣ ಹೊಂದಿದೆ. ಪ್ರತಿ ಚಕಿಮೀಗೆ 2,224 ಜನಸಾಂಧ್ರತೆ ಇದ್ದು, ಶೇ. 55 ಕೃಷಿಯೇತರ ಚಟುವಟಿಕೆಗಳು ಇದ್ದು, ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. 27&9&2023ರಂದು ಪುರಸಭೆ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ರ್ನಿಣಯ ಕೈಗೊಳ್ಳಲಾಗಿತ್ತು, ಅದರಂತೆ 1919ರಲ್ಲಿ ಆರಂಭವಾದ ಪುರಸಭೆ ನಗರಸಭೆಯ ಮಾನ್ಯತೆ ಪಡೆಯಲಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ಮಾತನಾಡಿ, ನಗರಸಭೆಯಾಗಿ ಪರಿವರ್ತನೆಯಾಗುವುದರಿಂದ ವಾರ್ಡಗಳ ಸಂಖ್ಯೆ 27ರಿಂದ 33ಕ್ಕೆ ಏರಿಕೆಯಾಗಲಿದೆ. ಹಿರಿಯ ಇಂಜಿನಿಯರ್, ಎರಡು ಕಿರಿಯ ಇಂಜಿನಿಯರ್, ಚ್ೀ ಅಕೌಂಟೆಂಟ್, ಎ್ಡಿಸಿ, ವಸೂಲಿ ಸಿಬ್ಬಂದಿ, ಪೌರ ಕಾರ್ಮಿಕರ ಹೆಚ್ಚಾಗಿ ನೇಮಕಾತಿ ನಡೆಯಲಿದೆ. ರಾಜ್ಯ ಸರ್ಕಾರದ ಅನುದಾನ ಹೆಚ್ಚಿಗೆ ಬರಲಿದ್ದು, ಕೇಂದ್ರ ಸರ್ಕಾರದ ಅನುದಾನ ಕೂಡ ಸಿಗಲಿದೆ. ಒಂದು ತಿಂಗಳಲ್ಲಿ ನೋಟಿಫಿಕೇಷನ್ ಮೂಲಕ ತಕರಾರು ಕರೆ ಮಾಡಿ ನಗರಸಭೆ ೂಷಣೆಯಾಗಲಿದೆ ಎಂದರು. 2011ರ ಜನಗಣತಿ ನಂತರ ನಗರಸಭೆ ಮಾಡಲು ಮನವಿ ಸಲ್ಲಿಸಲಾಗಿತ್ತು. ನಿಯಮ ಪ್ರಕಾರ 50 ಸಾವಿರ ಜನಸಂಖ್ಯೆಗೆ ಕೇವಲ 818 ಜನರ ಕಡಿಮೆಯಾಗಿತ್ತು. ಈಗ ಸಚಿವ ಸಂಪುಟದ ರ್ನಿಣಯದಿಂದ ಬೈಲಹೊಂಗಲ ಜನತೆ ಸಂತಸ ವ್ಯಕ್ತಪಡಿಸಿದ್ದು, ಶಾಸಕ ಮಹಾಂತೇಶ ಕೌಜಲಗಿ ಪ್ರಯತ್ನಕ್ಕೆ ಶ್ಲಾನೆ ವ್ಯಕ್ತವಾಗುತ್ತಿದೆ.