ಜಿಲ್ಲೆ

ಕಾರ್ಯಕರ್ತರ ಮೇಲೆ ಹಲ್ಲೆಗೈದ ಡಿವೈಎಸ್‌ಪಿಗೆ ಜಾಮೀನು

Mangaluru - Desk - Rajesh Shetty

ಪುತ್ತೂರು: ಬಿಜೆಪಿ ಮುಖಂಡರ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದ ಪ್ರಮುಖ ಆರೋಪಿ ಡಿವೈಎಸ್‌ಪಿ ವೀರಯ್ಯ ಹಿರೇಮಠ ಪುತ್ತೂರು ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದುಕೊಂಡಿದ್ದಾರೆ.

ಡಿವೈಎಸ್ ಪಿ.ವೀರಯ್ಯ ಹಿರೇಮಠ, ಸಂಪ್ಯ ಠಾಣೆ ಉಪನಿರೀಕ್ಷಕ ಶ್ರೀನಾಥ ರೆಡ್ಡಿ ಹಾಗೂ ಸಿಬ್ಬಂದಿ ಹರ್ಷಿತ್ ಪ್ರಕರಣ ಆರೋಪಿಗಳಾಗಿದ್ದರು. ವೀರಯ್ಯ ಹಿರೇಮಠ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದರೆ, ಶ್ರೀನಾಥ ರೆಡ್ಡಿ ಹಾಗೂ ಹರ್ಷಿತ್ ಅವರನ್ನು ಅಮಾನತು ಮಾಡಲಾಗಿತ್ತು. ಶ್ರೀನಾಥ ರೆಡ್ಡಿ ಹೊರ ಜಿಲ್ಲೆ ಉಪನಿರೀಕ್ಷಕ ಹುದ್ದೆ ಪಡೆದು ಕೆಲದಿನಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿರುವ ಬಗ್ಗೆ ಇಲಾಖೆ ಅಧಿಕೃತ ಮೂಲಗಳಿಂದ ಮಾಹಿತಿಯಿದೆ. ಹರ್ಷಿತ್ ಅವರನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿಯಿದೆ.