ಜಿಲ್ಲೆ

ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ, ವಿಎಕೆ ಫೌಂಡೇಷನ್ ಸೇವಾ ಕಾರ್ಯ

Dharwada - Basavaraj Idli

ಹುಬ್ಬಳ್ಳಿ: ಸದ್ಗುರು ಶ್ರೀ ಸಿದ್ಧಾರೂಢರ ಪರಮಶಿಷ್ಯ ಶ್ರೀ ಗುರುನಾಥರೂಢರು ಕಲಿತ ಹಳೇಹುಬ್ಬಳ್ಳಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ ವಿಎಕೆ ಫೌಂಡೇಷನ್ ವತಿಯಿಂದ ಮಕ್ಕಳಿಗೆ ಪಾಠೋಕರಣ ವಿತರಣೆ ಮಾಡಲಾಯಿತು.

ಮಕ್ಕಳಿಗೆ ಬ್ಯಾಗ್, ನೋಟಬುಕ್, ಚೇರ್, ಟೇಬಲ್ ಗಳನ್ನು ವಿತರಣೆ ಮಾಡಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಗೆ ಅವಶ್ಯಕತೆ ಇರುವ ಸ್ಮಾರ್ಟ್ ಬೋರ್ಡ್ ನೀಡುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಮಕ್ಕಳ ಸಹಾಯಕ್ಕಾಗಿ ಅಗತ್ಯ ಸೇವೆ ಸಲ್ಲಿಸುವುದಾಗಿ ತಿಳಿಸಿದರು.

ವೆಂಕಟೇಶ ಕಾಟವೆ, ಅವರ ಸ್ನೇಹ ಬಳಗ, ತೋಟಪ್ಪ ನಿಡಗುಂದಿ, ಸಮನ್ವಯಾಧಿಕಾರಿ ಅನಸೂಯ ಯಕ್ಕುಂಡಿ, ಗುರುಮಾತೆ ಶಕೀಲಾ ಗ್ಲಾಡಿಸ್, ಎಸ್ಡಿಎಂಸಿ ಅಧ್ಯಕ್ಷ ರಶ್ಮಿ ಭಾವಿಕಟ್ಟಿ, ಉಪಾಧ್ಯಕ್ಷ ವಿಜಯ ಜಿಂಗಾಡೆ, ಸದಸ್ಯರು, ಪೋಷಕರು, ಜಿ.ಎನ್. ಕುಬಿಹಾಳ ಇತರರು ಭಾಗವಹಿಸಿದ್ದರು.

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಚ್.ಎಂ. ಕುಂದರಗಿ, ವಿಶೇಷ ಸೇವೆಗಾಗಿ ಶಕೀಲಾ ಗ್ಲಾಡಿಸ್, ಲತಾ ಚುಳಕಿ, ರಾಜೇಂದ್ರ ಬಿದರಿ ಅವರನ್ನು ಸನ್ಮಾನಿಸಲಾಯಿತು.

ನಾರಾಯಣ ಪಾಂಡುರಂಗಿ ಸ್ವಾಗತಿಸಿದರು, ರಾಜೇಂದ್ರ ಬಿದರಿ ಕಾರ್ಯಕ್ರಮ ನಿರೂಪಿಸಿದರು. ಗಿರೀಜಾ ಚಲವಾದಿ ವಂದಿಸಿದರು.