ಡಾ.ಬಿ.ಆರ್.ಅಂಬೇಡ್ಕರವರ ಪರಿನಿರ್ವಾಹಣಾ ದಿನಾಚರಣೆ ಅಂಗವಾಗಿ ಹಳೆ ಬಾಗಲಕೋಟೆಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವರ ಪುತ್ಥಳಿಗೆ ಶಾಸಕ ವೀರಣ್ಣ ಚರಂತಿಮಠ ಮಾಲಾರ್ಪಣೆ ಮಾಡಿದರು. ವಿ.ಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮುಖಂಡರಾದ ಬಸವರಾಜ ಯಂಕಂಚಿ, ಸದಾನಂದ ನಾರಾ ಇತರರು ಇದ್ದರು 
ಜಿಲ್ಲೆ

ದೇಶಕಂಡ ಮಾದರಿ ಆದರ್ಶ ಪುರುಷ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕಂಡ ಮಾದರಿ ಆದರ್ಶ ಪುರುಷರಾಗಿದ್ದಾರೆ. ಇಂತಹ ನಾಯಕರು ದೇಶದಲ್ಲಿ ಮತ್ತೆ ಹುಟ್ಟಿ ಬರಬೇಕು. ಅವರು ಬರೆದ ಸಂವಿಧಾನ ಅಡಿಯಲ್ಲಿ ನಾವೆಲ್ಲರೂ ಇಂದು ಉತ್ತಮವಾದ ಪ್ರಜಾಪ್ರಭುತ್ವ ವ್ಯೆವಸ್ಥೆಯಲ್ಲಿರುವುದು ಹೆಮ್ಮೆಯ ವಿಷÀಯ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಆಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.
ಅಂಬೇಡ್ಕರ ನಮ್ಮನ್ನು ಅಗಲಿ ೬೪ ವರ್ಷ ಆಯಿತು. ನಾವೆಲ್ಲರೂ ಅವರು ನೀಡಿದ ಸಂವಿಧಾನದ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಅಂಬೇಡ್ಕರÀ ಆದರ್ಶವನ್ನು ಎಲ್ಲರು ಅನುಸರಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿ.ಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ. ಬಿಜೆಪಿ ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಮುಖಂಡರಾದ ರಾಜು ರೇವಣಕರ, ರಾಜು ನಾಯ್ಕರ್. ಬಸವರಾಜ್ ಯಂಕಂಚಿ, ಅಂಬಾಜಿ ಜೋಷಿ. ಸತ್ಯನಾರಾಯಣ ಹೇಮಾದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.