ಕೆ.ಆರ್.ಸಾಗರ : ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ನದಿಗೆ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ನಾಡಿಗೆ ಸುಭಿಕ್ಷವಾಗಲಿ. ಕಾವೇರಿ ಪ್ರಾಂತ್ಯದ ಕೃಷಿಕರು ಸಂತೋಷದಿಂದ ಫಸಲು ಬೆಳೆಯಲಿ. ಕಾವೇರಿ ಮಾತೆ ಪ್ರತಿ ವರ್ಷವೂ ತುಂಬಿ ಹರಿಯಲಿ ಎಂದರು. ಕಾವೇರಿ ನದಿ ತೀರದಲ್ಲಿ ಇರುವವರು ನದಿಯನ್ನು ಕಲಷಿತಮಾಡಬಾಋದು. ಕಾವೇರಿ ನಮ್ಮ ತಾಯಿ ಇದ್ದಂತೆ. ನಮ್ಮ ತಾಯಿಯನ್ನು ಮಡಿಲಿಗೆ ಕಸವನ್ನು ಎಂದಿಗೂ ಹಾಕಬಾರದು. ಪ್ರಕೃತಿ ದತ್ತವಾಗಿರುವಂತೆ ನದಿ ಸಂರಕ್ಷಿಸಿ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ಮಂಡ್ಯ ಜಿಲ್ಲಾಧ್ಯಕ್ಷ ಆನಂದ, ಉದ್ಯಮಿಗಳಾದ ವಿರೂಪಾಕ್ಷಪ್ಪ, ಶಿವರಾಮಯ್ಯ, ಅಮೃತೇಶ್, ಎಸ್.ಇ ಗಿರೀಶ್, ಸಿ.ಜೆ ಮುತ್ತಣ್ಣ, ಮಹಾಂತೇಶ್, ಸುಮಾ ಸಂಜಯ್, ಕೆ.ಆರ್.ಎಸ್ ವೀರಣ್ಣ , ಕೆ.ಬಿ.ಶಿವರಾಮಯ್ಯ ಚಂದ್ರವನ ಮಠದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ ಇತರರು ಇದ್ದರು.
*
ಪೋಟ 06-07-25--ಞಡಿ1 :
ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಚಂದ್ರವನ ಆಶ್ರಮದ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಬಾಗಿನ ಅರ್ಪಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಮಂಡ್ಯ ಜಿಲ್ಲಾಧ್ಯಕ್ಷ ಆನಂದ, ಉದ್ಯಮಿಗಳಾದ ವಿರೂಪಾಕ್ಷಪ್ಪ, ಶಿವರಾಮಯ್ಯ, ಅಮೃತೇಶ್, ಎಸ್.ಇ ಗಿರೀಶ್, ಸಿ.ಜೆ ಮುತ್ತಣ್ಣ, ಮಹಾಂತೇಶ್, ಸುಮಾ ಸಂಜಯ್, ಕೆ.ಆರ್.ಎಸ್ ವೀರಣ್ಣ ಇದ್ದರು.
: