ಜಿಲ್ಲೆ

ಬಾಗಲವಾಡದಲ್ಲಿ ಮಟ್ಕಾ ಹಾವಳಿ

Kopala - Desk - Eraveni

ಕವಿತಾಳ: ಸಮೀಪದ ಬಾಗಲವಾಡದಲ್ಲಿ ಮಟ್ಕಾ ಹಾವಳಿ ಹೆಚ್ಚಿದ್ದು, ಯುವಕರು ಮತ್ತು ಕೂಲಿಕಾರ್ಮಿಕರು ಬಲಿಯಾಗುತ್ತಿದ್ದಾರೆ.

ಬಸವಣ್ಣಕ್ಯಾಂಪ್, ಸೊಸೈಟಿಕ್ಯಾಂಪ್, ಲಕ್ಷ್ಮೀಕ್ಯಾಂಪ್‌ನ ಕೂಲಿಕಾರ್ಮಿಕರು ಬಾಗಲವಾಡಕ್ಕೆ ಬಂದು ಮಟ್ಕಾ ಆಡುತ್ತಿದ್ದಾರೆ. ಈಶ್ವರ ದೇವಸ್ಥಾನದಲ್ಲಿ ಹಗಲಲ್ಲೆ ಮಟ್ಕಾ ಬುಕ್ಕಿಗಳು ಆಟ ಆಯೋಜಿಸುವ ಮೂಲಕ ದೇವಸ್ಥಾನದ ಪಾವಿತ್ರೃಕ್ಕೆ ಧಕ್ಕೆ ತರುತ್ತಿದ್ದಾರೆ. ಹೋಟೆಲ್, ಸಂತೆ ಬಜಾರ್, ಮುಖ್ಯರಸ್ತೆ ಅಂಗಡಿಯೊಂದರಲ್ಲಿ ಜೂಜಾಟ ಆಡಲಾಗುತ್ತಿದೆ.

ಇದಲ್ಲದೆ ಕೆಲವರು ಮೊಬೈಲ್‌ನಿಂದಲೂ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ನೀರಾವರಿ ವ್ಯಾಪ್ತಿಯಲ್ಲಿರುವ ಬಾಗಲವಾಡ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದು, ದುಡಿದ ಹಣವನ್ನು ಜೂಜಾಟಕ್ಕಿಟ್ಟು ಕಳೆದುಕೊಳ್ಳುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮತ್ತು ಇತರ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಗ್ರಾಪಂ ಸದಸ್ಯರಾದ ಹುಸೇನಪ್ಪ, ನಾಗರಾಜ ಹಿಂದಿನಮನೆ, ಅಮರೇಶ, ಬಸವರಾಜ ಇತರರು ಒತ್ತಾಯಿಸಿದ್ದಾರೆ.

ಬಾಗಲವಾಡದಲ್ಲಿ ಮಟ್ಕಾ ಜೂಜಾಟ ನಡೆಯುವ ಬಗ್ಗೆ ಗಮನಕ್ಕೆ ಬಂದಿಲ್ಲ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂಜಾಟಗಳು ನಡೆಯುತ್ತಿದ್ದರೆ ದಾಳಿ ಮಾಡಿ ಕ್ರಮಕೈಗೊಳ್ಳಲಾಗುವುದು. ವೆಂಕಟೇಶ ನಾಯಕ ಪಿಎಸ್‌ಐ ಕವಿತಾಳ