ಜಿಲ್ಲೆ

ಬಾಗಲಕೋಟೆ: ಹೃದಯಾಘಾತದಿಂದ ಕಾರಲ್ಲೇ ಪ್ರಾಣಬಿಟ್ಟ ಆರ್​​​​ಎಸ್​​​ಎಸ್ ಮುಖಂಡ

Webdesk - Ashwini HR

ಬಾಗಲಕೋಟೆ: ಹೃದಯಾಘಾತದಿಂದ ಕಾರಲ್ಲೇ ಆರ್ ಎಸ್ ಎಸ್ ಮುಖಂಡ ಪ್ರಾಣಬಿಟ್ಟ ಘಟನೆ ಬಾಗಲಕೋಟೆ ಜಿಲ್ಲೆ‌ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮೃತಪಟ್ಟ ಸಿದ್ದು ಚಿಕ್ಕದಾನಿ (45) ಆರ್ ಎಸ್ ಎಸ್ ಜಿಲ್ಲಾ ಮುಖಂಡರಾಗಿದ್ದರು. ರಾತ್ರಿ ಕಾರಿಗೆ ಡಿಸೇಲ್ ಹಾಕಿಸಿ, ಪೆಟ್ರೋಲ್ ಪಂಪ್‌ನಿಂದ ಹೊರಡಲು ಕಾರು ಶುರು ಮಾಡಿದರು. ಆದರೆ ಪೆಟ್ರೋಲ್ ಪಂಪ್ ಆವರಣದಲ್ಲೇ ಇರುವಾಗಲೇ ಹೃದಯಾಘಾತವಾಗಿದೆ.

ಇಡೀ ರಾತ್ರಿ ಸಿದ್ದು ಚಿಕ್ಕದಾನಿ ಪಂಪ್ ಅವರಣದಲ್ಲಿ ಕಾರಲ್ಲೇ ಇದ್ದರು. ಬೆಳಗ್ಗೆ ಪಂಪ್ ಕಾರ್ಮಿಕರು ನಿನ್ನೆಯಿಂದ ನಿಂತಲ್ಲೇ ನಿಂತ ಕಾರು ಗಮನಿಸಿದ್ದರು. ಕಾರು ಬಾಗಿಲು ತೆರೆದು ನೋಡಿದಾಗ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ.
ಸಿದ್ದು ಚಿಕ್ಕದಾನಿ ಮುಧೋಳ ನಗರದ ನಿವಾಸಿಯಾಗಿದ್ದಾರೆ.