ಬಾಗಲಕೋಟೆ: ಪಿಟ್ಸ್ ಬಂದು ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದು ಅಜ್ಜಿಯ ವೆನಿಟ್ ಬ್ಯಾಗನ್ನು ರಕ್ಷಿಸಿ ವೃದ್ಧಿಗೆ ಎರಡು ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಕೊಡುವ ಮೂಲಕ ಬಾಗಲಕೋಟೆ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ೬೯ ವಯಸ್ಸಿನ ಕಲಾವತಿ ಎನ್ನುವ ವೃದ್ಧೆಗೆ ಮಂಗಳವಾರ ಸಂಜೆ ನವನಗರ ಬಸ್ ನಿಲ್ದಾಣದಲ್ಲಿ ಪಿಟ್ಸ್ ಬಂದು ಕುಸಿದು ಬಿದ್ದಿದ್ದರು. ಆಗ ಅಲ್ಲಿದ್ದ ಸಾರಿಗೆ ಸಿಬ್ಬಂದಿ ಅವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು.
ಅಜ್ಜಿ ಕುಸಿದು ಬಿದ್ದಿದ್ದ ವೇಳೆ ಪ್ಲಾಟ್ ಫಾರ್ಮ ನಲ್ಲಿ ತಮ್ಮ ವೆನಿಟ್ ಬ್ಯಾಗ್ ಇಟ್ಟಿದ್ದರು. ಇದನ್ನು ಗಮನಿಸಿದ್ದ ಸಾರಿಗೆ ನಿಯಂತ್ರಕ ಹಾಗೂ ಸಿಬ್ಬಂದಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ೧೩೬೨೦೦ ರೂ. ನಗದು, ಚಿನ್ನದ ಬೆಂಡಾಲಿ ಹಾಗೂ ಬೊರಮಾಳ ಸರ ಇತ್ತು. ಅದೆಲ್ಲವನ್ನು ಸಾರಿಗೆ ಘಟಕದಲ್ಲಿ ಜಮೆ ಮಾಡಿದ್ದರು. ಅಜ್ಜಿಗೆ ಚಿಕಿತ್ಸೆ ನೀಡಿದ ಬಳಿಕ ಇಂದು ಅವರ ಸಂಬಂಧಿಕರ ಜೊತೆಗೆ ಬಾಗಲಕೋಟೆ ಸಾರಿಗೆ ಘಟಕಕ್ಕೆ ತೆರಳಿದಾಗ ಜೋಪಾನಗಿಟ್ಟಿದ್ದ ಅಂದಾಜು ಎರಡು ಲಕ್ಷ ರೂ. ಮೌಲ್ಯ ಹೊಂದಿದ್ದ ನಗದು ಹಾಗೂ ಚಿನ್ನಾಭರಣವನ್ನು ಅವರಿಗೆ ಹಿಂತಿರುಗಿಸಿದರೆ.
ಸಾರಿಗೆ ನಿಯಂತ್ರಕ ಎಚ್.ಆರ್.ಗೌಡರ ಹಾಗೂ ಸಿಬ್ಬಂದಿ ಆ ವಸ್ತುಗಳನ್ನು ಘಟಕಕ್ಕೆ ಹಾಜರು ಪಡಿಸಿದ್ದರು. ಘಟಕ ವ್ಯವಸ್ಥಾಪಕ ಅಶೋಕ ಕೋರಿ ಅವರು ಅಜ್ಜಿಗೆ ಅವರ ಸಂಬಂಽಕರ ಸಮ್ಮುಖದಲ್ಲಿ ನಗದು ಹಾಗೂ ಚಿನ್ನಾಭರಣವನ್ನು ಅವರಿಗೆ ಕೊಟ್ಟರು.ಹಣ ಹಾಗೂ ಚಿನ್ನಾಭರಣ ಸುರಕ್ಷಿತವಾಗಿ ತಮ್ಮ ಕೈಗೆ ಸಿಕ್ಕಿದ್ದರಿಂದ ಅಜ್ಜಿ ಬಹಳ ಸಂತಸ ಪಟ್ಟರು. ಬಿಟ್ಟುಹೋಗಿದ್ದ ಹಣ ವಾಪಸ್ಸು ತಲುಪಿಸಿದ್ದಕ್ಕೆ ಧನ್ಯವಾದ ಹೇಳಿದರು.