ಜಿಲ್ಲೆ

ಒಂದೇ ಕುಟುಂಬದ 11 ಜನರಿಗೆ ಸೋಂಕು?

Bagalkot

ಬಾಗಲಕೋಟೆ: ನಗರದ ಮಾರವಾಡ ಗಲ್ಲಿಯ ಒಂದೇ ಕುಟುಂಬದಲ್ಲಿ ಹನ್ನೊಂದು ಜನರಿಗೆ ಕೋವಿಡ್ ಸೋಂಕು ಪತ್ತೆ ಆಗಿದೆ ಎಂದು ತಿಳಿದು ಬಂದಿದೆ.

ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಆ ಮನೆಯ ಸುತ್ತಮುತ್ತ ಪ್ರದೇಶವನ್ನು ಮಿನಿ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, ರಾತ್ರಿಯೇ ಬ್ಯಾರಿಕೇಡ್ ಹಾಕಿ ಜನಸಂಚಾರ ನಿರ್ಬಂಧಿಸಲಾಗಿದೆ.

ಕೋವಿಡ್ 2ನೇ ಅಲೆ ಭೀತಿಯಲ್ಲಿ ಇರುವಾಗಲೇ ಗಣ್ಯ ವ್ಯಾಪಾರಸ್ಥರೊಬ್ಬರ ಕುಟುಂಬದಲ್ಲಿ ಹಾಗೂ ಅವರ ಸಂಬಂಧಿಕರು ಸೇರಿ ಒಟ್ಟು ಹನ್ನೊಂದು ಜನರಿಗೆ ಕೋವಿಡ್ ಮಾರಿ ಪತ್ತೆ ಆಗಿದೆ.

ದಿಢೀರನೇ ಅಪ್ಪಳಿಸಿರುವ ಕೋವಿಡ್ 2ನೇ ಅಲೆಯಿಂದಾಗಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ. ಕಳೆದ ವರ್ಷವೂ ಮಾರ್ಚ್ ಅಂತ್ಯಕ್ಕೆ ಆತಂಕ ತೀವ್ರಗೊಂಡು ಏಪ್ರಿಲ್ ಮೊದಲ ವಾರ ಮೊದಲಿಗೆ ಹಳೇ ಬಾಗಲಕೋಟೆಯಲ್ಲಿ ಸೋಂಕು ಪತ್ತೆಯಾಗಿ, ಸಾವು ಸಹ ಸಂಭವಿಸಿತ್ತು.

ಇದೀಗ 2ನೇ ಅಲೆಯೂ ಹಳೇ ಬಾಗಲಕೋಟೆಯಲ್ಲಿ ಸ್ಫೋಟಗೊಂಡಿದ್ದು, ಮತ್ತೆ ಬಾಗಲಕೋಟೆ ಕಂಟಕ ಕಾದಿದೆಯಾ ಎನ್ನುವ ಆತಂಕ ಶುರುವಾಗಿದೆ.

ಒಂದೇ ಕುಟುಂಬದಲ್ಲಿ ಇಷ್ಟೊಂದು ಜನರಿಗೆ ಕೋವಿಡ್ ಕಾಣಿಸಿದ್ದು, ಇವರಿಗೆ ಸೋಂಕು ಹೇಗೆ ತಗುಲಿದೆ ಎನ್ನುವ ಬಗ್ಗೆ ಪರಿಶೀಲನೆ, ತನಿಖೆ ನಡೆಸಲಾಗುತ್ತಿದೆ.
ಇದೀಗ ಸೋಂಕಿತರ ಟ್ರಾವೆಲಿಂಗ್ ಹಿಸ್ಟರಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ, ಈಗ ಅವರ ಅಂಗಡಿಗೆ ಯಾರೆಲ್ಲ ಬಂದು ಹೋಗಿದ್ದಾರೆ, ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕದ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

EndFragment