ಜಿಲ್ಲೆ

ಪರಿಷತ್ ಸದಸ್ಯ ಪೂಜಾರಗೆ ಕರೊನಾ ಸೋಂಕು

Bagalkot

ಬಾಗಲಕೋಟೆ: ಕೆಲ ತಿಂಗಳಿಂದ ಜಿಲ್ಲೆಯಲ್ಲಿ ಶಾಂತವಾಗಿದ್ದ ಮಹಾಮಾರಿ ಕರೊನಾ ವರ್ಷದ ಆರಂಭದಲ್ಲೇ ಖಾತೆ ತೆರೆದಿದ್ದು, ನಿಧಾನಕ್ಕೆ ಅಬ್ಬರ ಹೆಚ್ಚಿಸುವ ಸೂಚನೆ ನೀಡಿದೆ. ಬುಧವಾರ ವಿಧಾನ ಪರಿಷತ್ ಪಿ.ಎಚ್.ಪೂಜಾರ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಗೆ ತೆರಳಬೇಕಿದ್ದ ಹಿನ್ನೆಲೆಯಲ್ಲಿ ಅವರ ಸ್ವಯಂ ಆಗಿ ಕರೊನಾ ಟೆಸ್ಟ್ ಮಾಡಿಸಿಕೊಂಡಿದ್ದು, ಸೋಂಕು ಇರುವುದು ಪತ್ತೆ ಆಗಿದೆ.

ಪೂಜಾರ ಅವರು ತಮ್ಮ ಕುಟುಂಬ ಸದಸ್ಯರು ಹಾಗೂ ಆಪ್ತರು ಸೇರಿ ಒಟ್ಟು 20 ಜನರು ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡಿದ್ದು, ಅವರಲ್ಲಿ ಪಿ.ಎಚ್.ಪೂಜಾರ ಹಾಗೂ ಅವರ ಕುಟುಂಬದ ಓರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ. ಯಾವುದೇ ಲಕ್ಷಣಗಳು ಕಾಣಿಸಿಲ್ಲ. ಹೀಗಾಗಿ ಸದ್ಯ ಬಾಗಲಕೋಟೆಯಲ್ಲಿ ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಕೆಲ ದಿನಗಳಿಂದ ತಮ್ಮ ಸಂಪರ್ಕದಲ್ಲಿ ಇರುವ ತಮ್ಮ ಅಭಿಮಾನಿಗಳು, ಆಪ್ತರು ಸಹ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಪಿ.ಎಚ್.ಪೂಜಾರ ಮನವಿ ಮಾಡಿದ್ದಾರೆ.