ಬಾದಾಮಿ: ಸ್ವಾತಂತ್ರ್ಯಕ್ಕೂ ಮೊದಲೆ ಕನ್ನಡದ ಕುರಿತು ಹೋರಾಟ ನಡೆದಿವೆ. ನಂತರವೂ ನಿರಂತರವಾಗಿ ಹೋರಾಟ ಮಾಡಿದ ಹಲವು ಮಹನೀಯರಿಗೆ ಕೊಡುಗೆ ಸ್ಮರಣೀಯ ಎಂದು ತಹಸೀಲ್ದಾರ ಬಿ.ಎಸ್.ಕಡಗಬಾವಿ ಹೇಳಿದರು.
ನಗರದ ಕುಮಾರೇಶ್ವರರ ಸಭಾಭವನದಲ್ಲಿ ಭಾನುವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಅಭಿಮಾನ ಕಡಿಮೆ ಆಗದಂತೆ ಆಡಳಿತ ಸರ್ಕಾರ, ಶಿಕ್ಷಕರು ಹಾಗೂ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದರು.
ತಾಪಂ ಇಒ ಸತೀಶ ಮಾಕೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಸ್.ಎಂ.ಹಿರೇಮಠ ಉಪನ್ಯಾಸ ನೀಡಿದರು. ಮುಖ್ಯಾಧಿಕಾರಿ ಎ.ಎಚ್.ಮುಜಾವರ, ಡಾ.ಶ್ರೀಕಾಂತ ಸಬ್ನೀಸ್, ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ಬಿಸಿಯೂಟ ಸಹಾಯಕ ನಿರ್ದೇಶಕ ಮಹಾಂತೇಶ ನಾರಗಲ್ಲ, ಕಸಾಪ ಅಧ್ಯಕ್ಷ ಬಿ.ಎಫ್. ಹೊರಕೇರಿ, ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ಡಾ.ಎಂ.ಬಿ.ಪಾಟೀಲ, ಬಾಳನಗೌಡ ಪಾಟೀಲ ಇದ್ದರು.