ಬೀಳಗಿ: ಶಿಕ್ಷಣಕ್ಕೆ ಮಹತ್ವ ಇದಷ್ಟು ಬೇರೇ ಯಾವುದಕ್ಕೆ ಇಲ್ಲ. ನಿಮ್ಮ ಸಾಧನೆ, ಗುರಿ, ಛಲ ಪ್ರಯತ್ನವಿದ್ದರೆ ಸಾಧನೆ ಮಾಡಲು ಸಾಧ್ಯ. ಮೌಲ್ಯಾಧಾರಿತ ಶಿಕ್ಷಣ ಪಡೆದು ದೇಶ ಹಾಗೂ ನಾಡಿನ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಪಟ್ಟಣದ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ಸೋಮವಾರ ನಡೆದ ತಾಲೂಕು ಆಡಳಿತ, ಸಮಾಜ ಕಲ್ಯಾಣ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಯುವ ಸಂಸತ್ತು ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರಿಶ್ರಮದಿಂದ ಮುಂದೆ ಬನ್ನಿ ಯಾರ ಮೇಲೆ ಅವಲಂಬಿತರಾಗಬೇಡಿ. ಮಕ್ಕಳಲ್ಲಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸುವ ಕೆಲಸ ಮಡಬೇಕು. ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತರಾಗಬೇಕು ಎಂದರು.
ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಯುವ ಸಂಸತ್ತು ಕಾರ್ಯಕ್ರಮ ನಡೆಯಿತು. ಮಹಿಳಾ ಸಬಲೀಕರಣ ಕುರಿತು ಅರಿವು ಮೂಡಿಸುವ ಅಧಿವೇಶನ ನಡೆಸುವ ಮೂಲಕ ತಮ್ಮ ಪ್ರತಿಭೆಯನ್ನು ವಿದ್ಯಾರ್ಥಿಗಳು ಅನಾವರಣಗೋಳಿಸಿದರು. ಸದನದಲ್ಲಿ 224 ವಿದ್ಯಾರ್ಥಿಗಳು ಭಾಗವಹಿಸಿದರು. ಪ್ರೇಕ್ಷಕರಾಗಿ ಐದು ನೂರು ಜನ ವಿದ್ಯಾರ್ಥಿಗಳು ಸದನದ ಕಲಾಪವನ್ನು ವಿಕ್ಷಣೆ ಮಾಡಿದರು.
ತಹಸೀಲ್ದಾರ್ ವಿನೋದ ಹತ್ತಳ್ಳಿ, ಬಿಇಒ ಅರ್.ಎಸ್. ಆದಾಪೂರ, ತಾಪಂ ಪ್ರಭಾರಿ ಇಒ ಶ್ರೀನಿವಾಸ ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಸಿ.ಎಸ್. ಗಡ್ಡದೇವರಮಠ, ಕಾಲೇಜು ಪ್ರಾಂಶುಪಾಲ ಶ್ರೀದೇವಿ ಪಾಟೀಲ, ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಜ್ಯೋತಿಬಾ ಅವತಾಡೆ, ಸಿದ್ದು ದಳವಾಯಿ ಇತರರಿದ್ದರು.