ಗುಳೇದಗುಡ್ಡದಲ್ಲಿ ತಾಲೂಕು ಆಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಆರ್.ಜಿ. ಸನ್ನಿ, ಜಿ.ವಿ. ರಜಪೂತ, ವೈ.ಆರ್. ಹೆಬ್ಬಳ್ಳಿ, ಶಿವಾನಂದ ವಾಲೀಕಾರ, ಭೀಮನಗೌಡ ಗೌಡ್ರ ಇತರರಿದ್ದರು. 
ಬಾಗಲಕೋಟೆ

ರಾಮನ ಆದರ್ಶ ಜಗತ್ತಿಗೆ ಪಸರಿಸಿದ ಕವಿ

ವಿಶ್ರಾಂತ ಪ್ರಾಚಾರ್ಯ ಆರ್.ಜಿ. ಸನ್ನಿ ಹೇಳಿಕೆ

ಗುಳೇದಗುಡ್ಡ: ವಾಲ್ಮೀಕಿ ಮಹರ್ಷಿ ರಾಮಾಯಣ ಮಹಾಕಾವ್ಯವನ್ನು ರಚಿಸಿ ಜಗತ್ತಿಗೆ ರಾಮನ ಆದರ್ಶ, ಹನುಮಂತನ ಭಕ್ತಿಯನ್ನು ಜಗತ್ತಿಗೆ ಪಸರಿಸಿದ್ದಾರೆ. ಇಂತಹ ಮಹಾನ್ ಕವಿಯ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅಮೀನಗಡದ ವಿಶ್ರಾಂತ ಪ್ರಾಚಾರ್ಯ ಆರ್.ಜಿ. ಸನ್ನಿ ಹೇಳಿದರು.

ಪಟ್ಟಣದ ಶಕ್ತಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಜಗತ್ತಿಗೆ ಭಾರತೀಯ ಶ್ರೀಮಂತ ಸಂಸ್ಕೃತಿಯನ್ನು ಸಾರಿವೆ ಎಂದರು.

ತಾಂತ್ರಿಕ ಯುಗದಲ್ಲಿ ಶಿಕ್ಷಣ ಅತ್ಯಂತ ಅವಶ್ಯವಾಗಿದ್ದು, ವಾಲ್ಮೀಕಿ ಸಮಾಜದ ಮಕ್ಕಳು ಉತ್ತಮ ಶಿಕ್ಷಣ, ಕೌಶಲ ಪಡೆಯಬೇಕು. ಸಮಾಜವನ್ನು ಸಂಘಟಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ ಎಂದರು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ತಹಸೀಲ್ದಾರ್ ಕಾರ್ಯಾಲಯದಿಂದ ಆದಿಕವಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ, ಕುಂಭಮೇಳ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ಉಪತಹಸೀಲ್ದಾರ್ ಜಿ.ವಿ. ರಜಪೂತ, ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ, ತಾಲೂಕು ವಾಲ್ಮೀಕಿ ನಾಯಕ ಸಭಾ ಅಧ್ಯಕ್ಷ ಶಿವಾನಂದ ವಾಲೀಕಾರ, ಉಪಾಧ್ಯಕ್ಷ ಭೀಮನಗೌಡ ಗೌಡ್ರ, ಶಿವು ಗೋತಗಿ, ಶಂಕ್ರಪ್ಪ ಗೌಡ್ರ, ಯಮನಪ್ಪ ಗೌಡ್ರ, ಶಿವಾನಂದ ವಾಲೀಕಾರ, ಶೇಖಪ್ಪ ಗೌಡ್ರ, ಕಲ್ಲನಗೌಡ ಗೌಡ್ರ, ಹೇಮಂತ ಮಲ್ಹಾರ, ರಾಮಣ್ಣ ಚಂದರಗಿ ಇತರರಿದ್ದರು.