ಬಾಗಲಕೋಟೆ ತೋಟಗಾರಿಕೆ ವಿವಿ ಆವರಣದಲ್ಲಿ ಈಚೆಗೆ ನಡೆದ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಕ್ರೀಡಾಪಟುಗಳಿಗೆ ವಿವಿ ಕುಲಪತಿ ಡಾ. ವಿಷ್ಣುವರ್ಧನ ಅವರು ಟ್ರೋಫಿ ವಿತರಿಸಿದರು. 
ಬಾಗಲಕೋಟೆ

ಮೈಸೂರು ತೋಟಗಾರಿಕೆ ಕಾಲೇಜು ಸಮಗ್ರ ವೀರಾಗ್ರಣಿ

17ನೇ ಅಂತರ್-ಮಹಾವಿದ್ಯಾಲಯಗಳ ಕ್ರೀಡಾಕೂಟ

ಬಾಗಲಕೋಟೆ : ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಈಚೆಗೆ ನಡೆದ 17ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯವೂ ಸಮಗ್ರ ವೀರಾಗ್ರಣಿ ಪ್ರಶಸ್ತಿ ಹಾಗೂ ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದುಕೊಂಡವು.

ಎರಡೂ ತಂಡಗಳಿಗೂ ಸಮಾರೋಪ ಸಮಾರಂಭದಲ್ಲಿ ತೋವಿವಿ ಕುಲಪತಿ ಡಾ. ವಿಷ್ಣುವರ್ಧನ ಹಾಗೂ ಇಲ್ಲಿನ ಕೆನರಾ ಬ್ಯಾಂಕಿನ ಎಜಿಎಂ ಯೋಗೇಶ ಪೂಜಾರಿ ಟ್ರೋಫಿಯನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಕುಲಪತಿ ಡಾ. ವಿಷ್ಣುವರ್ಧನ, ಸರ್ವತೋಮುಖ ಬೆಳವಣಿಗೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯವಾಗಿದೆ. ಇದು ಕ್ರೀಡೆಗಳಿಂದ ಲಭಿಸುತ್ತದೆ. ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಗಳಲ್ಲಿ ಭಾಗವಹಿಸಿದಾಗ ಮಾತ್ರ ಗುಣಮಟ್ಟದ ಅಧ್ಯಯನ ಹಾಗೂ ಜ್ಞಾನ ಪಡೆಯಬಹುದು. ಕ್ರೀಡೆಯಿಂದ ಏಕಾಗ್ರತೆ, ಸಮನ್ವಯ, ಅನುಭವವಾಗುತ್ತದೆಂದು ಹೇಳಿದರು.

ಕೆನರಾ ಬ್ಯಾಂಕಿನ ಎಜಿಎಂ ಯೋಗೇಶ ಪೂಜಾರಿ ಮಾತನಾಡಿ, ಈ ಸಮಯವನ್ನು ನೋಡಿದರೆ ನನಗೆ ನನ್ನ ಕಾಲೇಜಿನ ಹಳೆಯ ದಿನಗಳು ಮರುಕಳಿಸುತ್ತಿವೆ. ಸತತ ಪ್ರಯತ್ನ ಹಾಗೂ ಪರಿಶ್ರಮ ಯಶಸ್ಸಿಗೆ ತಕ್ಕ ಲವೆಂದು ಹೇಳಿದರು.

ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕ ಪರಶುರಾಮ ಡಿ., ತೋವಿವಿ ಡೀನ್ ಡಾ. ಶಾಂತಪ್ಪ ತಿರಕಣ್ಣವರ, ಡಾ. ಎಂ.ಜಿ. ಕೆರುಟಗಿ, ಡಾ. ರಾಜಶೇಖರ ಹಿರೇಮಠ, ಡಾ. ಐ.ಬಿ. ಬಿರಾದಾರ ಇತರರಿದ್ದರು.