ಬಾಗಲಕೋಟೆ

ನಿಯಮಿತ ಆರೋಗ್ಯ ತಪಾಸಣೆ ಅವಶ್ಯ

ಆಸ್ಪತ್ರೆ ನಿರ್ದೇಶಕ ಡಾ. ನವೀನ ಚರಂತಿಮಠ ಅಭಿಮತ

ಬಾಗಲಕೋಟೆ: ಆರೋಗ್ಯವಂತ ರೈತರಿಂದ ಆರೋಗ್ಯವಂತ ದೇಶ ನಿರ್ಮಾಣ ಸಾಧ್ಯ ಎಂದು ಎಚ್‌ಎಸ್‌ಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ದೇಶಕ ಡಾ. ನವೀನ ಚರಂತಿಮಠ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಅಂಗವಾಗಿ ನಡೆದಿರುವ ಸೇವಾ ಸಂಕಲ್ಪ ಅಭಿಯಾನದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಹಾಗೂ ಎಸ್.ಎನ್. ಮೆಡಿಕಲ್ ಕಾಲೇಜು ಮತ್ತು ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಸಹಯೋಗದಲ್ಲಿ ಬೆಣ್ಣೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ರೋಗಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಗ್ರಾಮೀಣ ಜನರು ಇಂತಹ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು. ಆರೋಗ್ಯವಂತ ದೇಶ ನಿರ್ಮಾಣಕ್ಕೆ ಆರೋಗ್ಯವಂತ ಸಮಾಜ ಮುಖ್ಯ ಎಂದು ತಿಳಿಸಿದರು.

ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಮುತ್ತಣ್ಣ ಬೆಣ್ಣೂರು ಮಾತನಾಡಿ, ಆರೋಗ್ಯವೇ ನಮ್ಮೆಲ್ಲರ ಭಾಗ್ಯ. ಮಕ್ಕಳು, ಹಿರಿಯರು ಸೇರಿ ಸಮಾಜದ ಪ್ರತಿಯೊಬ್ಬರ ಆರೋಗ್ಯದ ಹಿತ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ನಮ್ಮ ಆರೋಗ್ಯ, ನಮ್ಮ ಕರ್ತವ್ಯ ಎಂಬ ಆಶಯದೊಂದಿಗೆ ಶಿಬಿರ ಆಯೋಜಿಸಲಾಗಿದೆ ಎಂದರು.

ಗ್ರಾಮದ ಮಲ್ಲಯ್ಯ ಹಿರೇಮಠ, ಸಿದ್ದರಾಮಗೌಡ ಪಾಟೀಲ, ಗುರಪ್ಪ ಜಗಲಿ, ರಾಚಪ್ಪ ಬೀಳಗಿ, ಮಲ್ಲಯ್ಯ ಹಿರೇಮಠ, ಸಿದ್ದರಾಮಗೌಡ ಪಾಟೀಲ, ಶರಣಪ್ಪ ಹುಗ್ಗಿ, ಸಂಗಮೇಶ ಹೋಳಿ, ಶಂಕ್ರಪ್ಪ ರಾಂಪೂರ, ಸಿದ್ದಪ್ಪ ಕೊಣ್ಣೂರ ಇದ್ದರು.

ಡಾ. ಸಮೀರಕುಮಾರ ಕುಲಕರ್ಣಿ, ಡಾ. ಕಿರಣ ಬಿಜಾಪುರ, ಡಾ. ವಿಠ್ಠಲ ಕುಂಬಾರ, ಡಾ. ಜ್ಯೋತಿ ಉಳಿಗೇರ, ಡಾ. ವಿಶ್ವನಾಥ ಇತರರು ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿದರು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವೂ ನಡೆಯಿತು.