ಮುಧೋಳ ತಾಲೂಕಿನ ಕುಳಲಿ ಗ್ರಾಮದ ತೋಟದ ವಸ್ತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಪ್ಪಾಶಿ ಶಿವಪ್ಪ ನಡುವಿನಮನಿ, ಪತ್ನಿ ರಾಜೇಶ್ವರಿ ಅಪ್ಪಾಶಿ ನಡುವಿನಮನಿ. 
ಬಾಗಲಕೋಟೆ

ತೋಟದ ಮನೆಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣು

ಕಬ್ಬಿಣದ ಆ್ಯಂಗಲ್‌ಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮುಧೋಳ : ತಾಲೂಕಿನ ಕುಳಲಿ ಗ್ರಾಮದ ತೋಟದ ವಸ್ತಿಯ ಮನೆಯಲ್ಲಿ ಪತಿ ಮತ್ತು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ.

ಮತರನ್ನು ಕುಳಲಿ ಗ್ರಾಮದ ತೋಟದ ವಸ್ತಿಯ ನಿವಾಸಿಗಳಾದ ಅಪ್ಪಾಶಿ ಶಿವಪ್ಪ ನಡುವಿನಮನಿ (35) ಮತ್ತು ಅವರ ಪತ್ನಿ ರಾಜೇಶ್ವರಿ ಅಪ್ಪಾಶಿ ನಡುವಿನಮನಿ (33) ಎಂದು ಗುರುತಿಸಲಾಗಿದೆ.

ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಅಪ್ಪಾಶಿ ನಡುವಿನಮನಿ ನ. 20ರಂದು ನಸುಕಿನಲ್ಲಿ ತಮ್ಮ ಮನೆಯ ಹೊರಗಿರುವ ದನ ಕಟ್ಟುವ ಪತ್ರಾಸ್ ಶೆಡ್‌ನ ಮೇಲ್ಛಾವಣಿಯ ಕಬ್ಬಿಣದ ಆ್ಯಂಗಲ್‌ಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನು ಕಂಡ ಪತ್ನಿ ರಾಜೇಶ್ವರಿ ಆಘಾತಕ್ಕೊಳಗಾಗಿ ಹಿಂದೆ ಮುಂದೆ ವಿಚಾರಿಸದೆ ಮನೆಯ ಬೆಡ್‌ರೂಮ್‌ಗೆ ತೆರಳಿ, ನಸುಕಿನ 4.20 ಗಂಟೆಯ ವೇಳೆಗೆ ಮನೆಯ ಸ್ಲ್ಯಾಬ್‌ನ ಕೆಳಗಿರುವ ಕಬ್ಬಿಣದ ಹುಕ್‌ಗೆ ಪತ್ತಲದಿಂದ ನೇಣು ಬಿಗಿದುಕೊಂಡು ಅವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಬಕವಿ-ಬನಹಟ್ಟಿ ತಾಲೂಕಿನ ಮಾರಾಪೂರದ ನಿವಾಸಿ ಶ್ರೀಶೈಲ ಮಡ್ಡೆಪ್ಪ ಯಡಹಳ್ಳಿ (36) ನೀಡಿದ ದೂರಿನ ಮೇರೆಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮುಧೋಳ ಠಾಣೆಯ ಪಿಎಸ್‌ಐ ಶಿವಾನಂದ ಕಾರಜೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.