ಜಮಖಂಡಿ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಎಸಿ ಶ್ವೇತಾ ಬೀಡಿಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಹಸೀಲ್ದಾರ್ ಅನೀಲ ಬಡಿಗೇರ ಇದ್ದಾರೆ. 
ಬಾಗಲಕೋಟೆ

ಕ್ಷೇತ್ರದಲ್ಲಿ 1,95,931 ಅಂತಿಮ ಮತದಾರರು

ಎಸಿ ಶ್ವೇತಾ ಬೀಡಿಕರ ಮಾಹಿತಿ

ಜಮಖಂಡಿ: ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಮತದಾರರ ಪಟ್ಟಿಯಲ್ಲಿ 97,875 ಪುರುಷರು ಹಾಗೂ 98,048 ಮಹಿಳೆಯರು, 8 ಇತರೆ ಸೇರಿದಂತೆ ಒಟ್ಟು 1,95,931 ಮತದಾರರು ಅಂತಿಮವಾಗಿ ಮತದಾರರ ಪಟ್ಟಿಯಲ್ಲಿ ಉಳಿದಿದ್ದಾರೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.

ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲಿನ ಮತದಾರರ ಪಟ್ಟಿಯಲ್ಲಿ 230006 ಮತದಾರರಿದ್ದರು. ವಿಶೇಷ ಪರಿಷ್ಕರಣೆಯಲ್ಲಿ 36,739 ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ, ನಕಲಿ ಮತದಾರರು, ಬೇರೆಕಡೆ ಸ್ಥಳಾಂತರ, ವರ್ಗಾವಣೆ ಹೊಂದಿದವರು, ಮೃತಪಟ್ಟವರು, ಗುರುತಿಗೆ ಸಿಗದವರು ಸೇರಿದ್ದಾರೆ ಎಂದರು.

ಪರಿಶೀಲನೆಯ ನಂತರ 2,564 ಮತದಾರರ ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆಗೆ ಕರೆಯಲಾಗಿತ್ತು. ಸಂಬಂಧಿತ ಮತದಾರರು ಅಗತ್ಯ ದಾಖಲೆ ಸಲ್ಲಿಸಿ, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಅವಕಾಶ ಪಡೆದರು. ವಿಚಾರಣೆಯ ಬಳಿಕ ಅಂತಿಮ ಹಂತದಲ್ಲಿ 73 ಮತದಾರರ ಹೆಸರು ಮಾತ್ರ ಕೈಬಿಡಲಾಗಿದೆ.

ಅ.24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 1,93,267 ಮತದಾರರಿದ್ದರು. ಪರಿಶೀಲನೆ, ವಿಚಾರಣೆ ಹಾಗೂ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಪಟ್ಟಿಯಲ್ಲಿ 1,95,931 ಮತದಾರರು ದಾಖಲಾಗಿದ್ದಾರೆ ಎಂದರು.

ತಹಸೀಲ್ದಾರ್ ಅನೀಲ ಬಡಗೇರ ಮಾತನಾಡಿ, ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ತಾಲೂಕು ಆಡಳಿತದ ವತಿಯಿಂದ ವ್ಯವಸ್ಥಿತವಾಗಿ ಸ್ವೀಪ್ ಚಟುವಟಿಕೆಗಳನ್ನು ನಡೆಸಲಾಗಿದೆ. ಇದರ ಲವಾಗಿ 3,312 ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಇನ್ನು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಬಯಸಿದವರು ಾರಂ ನಂ6 ರನ್ನು ತುಂಬಿ ದಾಖಲೆ ಒದಗಿಸಬೇಕು. ಪಟ್ಟಿಗೆ ಸೇರ್ಪಡೆಯ ಕಾರ್ಯ ಎಂದಿನಂತೆ ನಡೆಯುತ್ತದೆ ಎಂದರು.