ಹುನಗುಂದ ತಾಲೂಕಿನ ಅಮರಾವತಿ ಗ್ರಾಮದ ಕೃಷಿ ಕ್ಷೇತ್ರಕ್ಕೆ ಈರುಳ್ಳಿ ಬೆಳೆ ಹಾನಿ ವೀಕ್ಷಿಸಿದ ಕೇಂದ್ರ ಬರ ಅಧ್ಯಯನ ತಂಡದ ನಿರ್ದೇಶಕ ಡಾ. ಮನ್‌ಸಿಂಗ್, ಕಾರ್ಯದರ್ಶಿ ಶ್ರೀಪಾರ್ಥ ಪಾಲ್, ಅಧೀನ ಕಾರ್ಯದರ್ಶಿ ರಾಕೇಶಕುಮಾರ, ಸಚಿವ ವಿಜಯಾನಂದ ಕಾಶಪ್ಪನವರ ವೀಕ್ಷಿಸಿದರು. 
ಬಾಗಲಕೋಟೆ

ಕೇಂದ್ರ ಹೆಚ್ಚಿನ ಬರ ಪರಿಹಾರ ನೀಡಲಿ

ಸಚಿವ ವಿಜಯಾನಂದ ಕಾಶಪ್ಪನವರ ಆಗ್ರಹ

ಹುನಗುಂದ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕಂದಾಯ ಸಚಿವ ಜಿ.ಪರಮೇಶ್ವರ ಮೊದಲನೇ ಹಂತದಲ್ಲಿ 1250 ಕೋಟಿ ರೂ. 50 ಲಕ್ಷಕ್ಕೂ ಹೆಚ್ಚಿನ ರೈತರಿಗೆ 2500 ರೂ. ಬರ ಪರಹಾರ ಘೋಷಣೆ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

ಬರ ಅಧ್ಯಯನ ಸಂದರ್ಭದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಹೆಚ್ಚಿನ ಬರ ಪರಿಹಾರ ಹಣ ಕೇಂದ್ರ ಸರ್ಕಾರದ ನಿರೀಕ್ಷೆಯಲ್ಲಿದ್ದೇವೆ. ಎನ್‌ಡಿಆರ್‌ಎ್ ನಿಂದ ಅನುದಾನ ರೈತರಿಗೆ ನೀಡಬೇಕು. ಕಬ್ಬು ಬೆಳೆಗಾರರಿಗೆ ಎ್ಆರ್‌ಪಿ, ಎಂಎಸ್‌ಪಿ ನಿಗದಿ ಆಗಬೇಕಿದೆ. ಕೇಂದ್ರ ಸರ್ಕಾರಕ್ಕೆ ಅನೇಕ ಪತ್ರದ ಮೂಲಕ ಸಿಎಂ ಡಿ.ಕೆ. ಶಿವಕುಮಾರ ಸಂದೇಶ ಕಳುಹಿಸಿದ್ದಾರೆ. ಹೀಗಾಗಿ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿದೆ. ಅನ್ನದಾತರ ರಕ್ಷಣೆ ನಮ್ಮ ಸರ್ಕಾರ ಕರ್ತವ್ಯ ಎಂದರು.

2023ರಲ್ಲಿ ಇದೆ ರೀತಿ ಬರ ಪರಸ್ಥಿತಿ ಎದುರಿಸಿದಾಗ ರಾಜ್ಯ ಸಕಾರದಿಂದ ಹೋರಾಟ ನಡೆಸಿ. ಕೊನೆಗೆ ಸರ್ವೋಚ್ಛ ನ್ಯಾಯಾಲಯದ ಮೂಲಕ ಬರ ಪರಿಹಾರ ತರುವ ಕೆಲಸ ಮಾಡಿದ್ದೇವೆ. ಈ ಬಾರಿ ಕೇಂದ್ರದಿಂದ ಪರಿಹಾರ ನೀಡುವ ವಿಶ್ವಾಸವಿದೆ ಎಂದರು.

ಈಗಾಗಲೇ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ವರದಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ 4,500 ಕೋಟಿ ರೂ.ಗೂ ಹೆಚ್ಚು ಬೆಳೆ ಹಾನಿಗೆ ಅನುದಾನ ನೀಡಬೇಕು. ರಾಜ್ಯ ಸರ್ಕಾರ ಬರ ಪರಿಹಾರ ಘೋಷಣೆ ಮಾಡಿದೆ. ಈಗ ಕೇಂದ್ರ ಸರ್ಕಾರ ಪರಿಹಾರ ನೀಡಬೇಕೆದೆ. 2ನೇ ಹಂತದಲ್ಲಿ ಹೆಚ್ಚಿನ ಪರಿಹಾರ ರೈತರಿಗೆ ನೀಡುವ ಕುರಿತು ನಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಬಿಜೆಪಿಯು ಈ ರಾಜ್ಯದಲ್ಲಿ ಅಸ್ತಿತ್ವವನ್ನು ಕಳೆದುಕೊಂಡಿದೆ. ಅಸ್ತಿತ್ವ ಉಳಿಸಿಕೊಳ್ಳಲು ಪಾದಯಾತ್ರೆ ಮಾಡಿದೆ. ರಾಜ್ಯದ ಸಂಸದರು ರೈತರ ಪರವಾಗಿ ಸಂಸತ್‌ನಲ್ಲಿ ಧ್ವನಿ ಎತ್ತಿಲ್ಲ. ವಿರೋಧ ಪಕ್ಷದವರು ರಾಜ್ಯದ ಬರ ಪರಿಹಾರ ಬಗ್ಗೆ ಟೀಕೆ ಮಾಡುತ್ತಾರೆ. ಕೇಂದ್ರ ಸರ್ಕಾರಕ್ಕೆ ರಾಜ್ಯದ ಬಗ್ಗೆ ಪರಿಸ್ಥಿತಿ ತಿಳಿಸಿರಿ, ನಾವು ಸರ್ವಪಕ್ಷದ ನಿಯೋಗ ಬರಲು ಸಿದ್ಧರಿದ್ದೇವೆ ಎಂದರು.

ಜಿಲ್ಲಾಧಿಕಾರಿ ಸಂಗಪ್ಪ ಎಂ., ಜಿ.ಪಂ. ಸಿಇಒ ಗಜಾನನ ಬಾಲೆ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ತೋಟಗಾರಿಕೆ ಇಲಾಖೆ ಸಂಶೋಧನಾ ನಿರ್ದೇಶಕ ಡಾ. ವಸಂತ ಗಾಣೀಗೇರ, ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಇದ್ದರು.