ಜಮಖಂಡಿ ನಗರದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ರೈತರು ಕಬ್ಬಿನ ಬೆಳೆಗೆ ಸೂಕ್ತ ಬೆಲೆ ನಿಗದಿ ಪಡಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಶ್ರೀಶೈಲ ಭೂಮಾರ, ರಾಜು ನದಾ, ಬಾಹುಬಲಿ ನ್ಯಾಮಗೌಡ, ಸಿದ್ದಪ್ಪ ಬಣಜನವರ ಇತರರಿದ್ದಾರೆ. 
ಬಾಗಲಕೋಟೆ

ಕಬ್ಬಿನ ಬೆಳೆಗೆ ಸೂಕ್ತ ಬೆಲೆ ನಿಗದಿಗೆ ಆಗ್ರಹಿಸಿ ಪ್ರತಿಭಟನೆ

ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ

ಜಮಖಂಡಿ: ತಾಲೂಕು ಕಚೇರಿ ಎದುರು ಕಬ್ಬಿನ ಬೆಳೆಗೆ ಸೂಕ್ತ ಬೆಲೆ ನಿಗದಿ ಪಡಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಲವಾಗಿದೆ ಎಂದು ರೈತರು ಆಕ್ರೋಶ ಹೊರಹಾಕಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಸೂಕ್ತ ನಿರ್ಧಾರ ಪ್ರಕಟಿಸಿ ಕಬ್ಬು ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು. ಕಳೆದ ವರ್ಷದ ಬಾಕಿ ಉಳಿಸಿ ಕೊಂಡಿರುವ ಬಿಲ್‌ಗಳನ್ನು ಬಿಡುಗಡೆ ಗೊಳಿಸಿದ ನಂತರ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಕಬ್ಬಿನ ಹಂಗಾಮು ಪ್ರಾರಂಭಕ್ಕೂ ಮುನ್ನ ಕಬ್ಬಿಗೆ ದರ ನಿಗದಿ ಪಡಿಸಬೇಕು, ಕಬ್ಬು ಬೆಳಗಾರರಿಗೆ ಅನ್ಯಾಯ ವಾಗದಂತೆ ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ಶ್ರೀಶೈಲ ಭೂಮಾರ, ರಾಜು ನದಾ, ಬಾಹುಬಲಿ ನ್ಯಾಮಗೌಡ, ಸಿದ್ದಪ್ಪ ಬಣಜನವರ, ಸದಾಶಿವ ಕವಟಗಿ, ಗುರಯ್ಯ ಪೂಜಾರ, ಮರೆಯಪ್ಪ ಬೆಳಗಲಿ, ಕಲ್ಲಪ್ಪ ಬಿರಾದಾರ, ಸಚಿನ ಖಿದ್ರಾಪುರ, ಸಿದ್ದುಗೌಡ ಪಾಟೀಲ ಇತರರಿದ್ದರು.