ಮಹಾಲಿಂಗಪುರ: ಹತ್ತನೇ ಶತಮಾನದ ಮಹಾಕವಿ ರನ್ನ ತಮ್ಮ ಅಪೂರ್ವ ಕಾವ್ಯ ಪ್ರತಿಭೆ ಹಾಗೂ ಸಾಹಿತ್ಯ ಸಷ್ಟಿಯ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಆದಿಕವಿ ಪಂಪ, ಪೊನ್ನ ಅವರೊಂದಿಗೆ ಕನ್ನಡದ ರತ್ನತ್ರಯರಲ್ಲಿ ಸ್ಥಾನ ಪಡೆದಿರುವ ರನ್ನನ ಸಾಹಿತ್ಯ ಇಂದಿಗೂ ಓದುಗರಿಗೆ ಸ್ಫೂರ್ತಿಯಾಗಿದೆ ಎಂದು ಬಾಗಲಕೋಟೆ ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ದೇಸಾಯಿ ಹೇಳಿದರು.
ಸಮೀಪದ ರನ್ನಬೆಳಗಲಿಯ ಸಿದ್ಧಾರೂಢ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ತಿಂಗಳಿಗೊಂದು ರನ್ನ ಉಪನ್ಯಾಸ ಮಾಲಿಕೆ ಉದ್ಘಾಟಿಸಿ, ಮಹಾಕವಿ ರನ್ನನ ಜೀವನ ಮತ್ತು ಸಾಹಿತ್ಯ ಸಾಧನೆ ಕುರಿತು ಅವರು ಮಾತನಾಡಿದರು.
ಕವಿ ರನ್ನ ಮತ್ತು ಗಂಗರ ದಂಡನಾಯಕ ಚಾವುಂಡರಾಯರ ನಡುವೆ ಗುರುಕುಲದ ಸಹಪಾಠಿಗಳಾಗಿದ್ದ ಕಾಲದಿಂದಲೇ ಆತ್ಮೀಯ ಸ್ನೇಹವಿತ್ತು. ರನ್ನನ ಸಾಹಿತ್ಯ ಬದುಕಿನ ಆರಂಭದಲ್ಲಿ ಚಾವುಂಡರಾಯರು ಪ್ರಮುಖ ಪ್ರೋತ್ಸಾಹಕರಾಗಿದ್ದರು. ಅವರ ಸ್ನೇಹದ ಸ್ಮರಣಾರ್ಥ ಇಂದ್ರಗಿರಿ ಬೆಟ್ಟದಲ್ಲಿ ಇಬ್ಬರ ಹೆಸರುಗಳು ಕೆತ್ತಲ್ಪಟ್ಟಿವೆ. ಚಾವುಂಡರಾಯರ ಮೇಲಿನ ಗೌರವ ಮತ್ತು ಕತಜ್ಞತೆಯ ಸಂಕೇತವಾಗಿ ರನ್ನ ತಮ್ಮ ಮಗನಿಗೆ ರಾಯ ಎಂದು ಹೆಸರಿಟ್ಟಿದ್ದರು ಎಂದು ವಿವರಿಸಿದರು.
ಮುಧೋಳದ ಯುವ ಸಾಹಿತಿ ಮಲ್ಲಿಕಾರ್ಜುನ ಅರಬಿ ಮಾತನಾಡಿ, ರನ್ನನ ಗದಾಯುದ್ಧ ಕಾವ್ಯ ಕನ್ನಡ ಸಾಹಿತ್ಯದ ಮಹತ್ವದ ಕತಿಗಳಲ್ಲೊಂದು. ಹತ್ತು ಆಶ್ವಾಸಗಳ 576 ಪದ್ಯಗಳನ್ನು ಒಳಗೊಂಡ ಈ ಕಾವ್ಯವು ಭೀಮ ಮತ್ತು ದುರ್ಯೋಧನರ ಗದಾಯುದ್ಧದ ಕಥಾವಸ್ತುವನ್ನು ಆಧರಿಸಿದೆ. ವೀರರಸ, ಶೌರ್ಯ, ಧೈರ್ಯ ಹಾಗೂ ಮಾನವೀಯ ಮೌಲ್ಯಗಳ ಅಭಿವ್ಯಕ್ತಿಯಿಂದ ಈ ಕತಿ ರನ್ನನ ಕಾವ್ಯ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.
ಚಂದ್ರಶೇಖರ ದೇಸಾಯಿ ಅವರು ಸುಮಾರು 50 ಸಾಹಿತ್ಯ ಕತಿಗಳನ್ನು ಒಳಗೊಂಡ ಪುಸ್ತಕಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಓದು ಮತ್ತು ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಉಪನ್ಯಾಸ ಮಾಲಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ.
ಶಿಕ್ಷಕ ಎಂ.ಎ. ಮುಗಳಖೋಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಂ.ಬಿ. ಮುರಗೋಡ, ವಿ.ಎಂ. ಹೊಸೂರ, ಪಿ.ಕೆ. ಪವಾರ, ಅಕ್ಷತಾ ಕುಲಗೋಡ, ಬಿ.ಎಂ. ಹವಾಲ್ದಾರ, ಆನಂದ ಹೊಸಟ್ಟಿ, ಅನೀಲ ನಡವಿನಮನಿ, ಮಂಜುನಾಥ ಪೂಜಾರಿ ಸೇರಿ ವಿದ್ಯಾರ್ಥಿಗಳಾದ ಅಮನ್ ಇನಾಂದಾರ ಹಾಗೂ ಆರ್ಯನ್ ಸರವೆ ಉಪಸ್ಥಿತರಿದ್ದರು. ಶಿಕ್ಷಕ ಬಿ.ಪಿ. ಚೋಪಡೆ ನಿರೂಪಿಸಿದರು.