ಬಾದಾಮಿ ಪಟ್ಟಣದ ಅಂಜುಮನ್ ಸಂಸ್ಥೆ ಸಭಾಭವನದಲ್ಲಿ ಉದ್ಯೋಗಾವಕಾಶ ಕಾರ್ಯಕ್ರಮವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟಿಸಿದರು. ಎಸ್.ಎಂ. ಹಿರೇಮಠ, ರಾಜಮಹ್ಮದ ಬಾಗವಾನ, ದೊಡಮನಿ, ಇತರರಿದ್ದರು. 
ಬಾಗಲಕೋಟೆ

ಯುವಕರು ಕುಟುಂಬಕ್ಕೆ ಆಸರೆಯಾಗಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿಕೆ
  • ಉದ್ಯೋಗಾವಕಾಶ ಕಾರ್ಯಕ್ರಮ ಉದ್ಘಾಟನೆ
  • ಯುವಕರಿಗೆ ಉದ್ಯೋಗವಕಾಶ ಒದಗಿಸುವ ಕಾರ್ಯಕ್ರಮ
ಬಾದಾಮಿ: ಯುವಕರು ಸಿಕ್ಕ ಉದ್ಯೋಗ ಪಡೆದು ಚೆನ್ನಾಗಿ ಕೆಲಸ ಮಾಡಿ ಕುಟುಂಬಕ್ಕೆ ಆಸರೆಯಾಗಬೇಕು. ಯುವಕರಿಗೆ ಉದ್ಯೋಗವಕಾಶ ಒದಗಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಅಂಜುಮನ್ ಸಂಸ್ಥೆ ಸಭಾಭವನದಲ್ಲಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ತಾಲೂಕು ಘಟಕದ ಪ್ರಾಯೋಕತ್ವ ಹಾಗೂ ಬಾನು ಅಸೋಸಿಯೇಟ್ಸ್ ಗೋವಾ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಯೋಗಾವಕಾಶ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ನದಾಫ್, ಪಿಂಜಾರ ಸಂಘದ ಅಧ್ಯಕ್ಷ ವೈ.ಎಫ್. ಶರೀಫ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗಾವಕಾಶದಲ್ಲಿ 55 ಯುವಕರು ಆಯ್ಕೆಯಾದರು.
ಹಿರಿಯ ಪತ್ರಕರ್ತ ಎಸ್.ಎಂ. ಹಿರೇಮಠ, ಪುರಸಭೆ ಮಾಜಿ ಸದಸ್ಯರಾದ ರಾಜಮಹ್ಮದ ಬಾಗವಾನ, ಾರೂಖ ಅಹ್ಮದ್ ದೊಡಮನಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯುಸ್ು ಪೀರ್ಜಾದೆ, ಸದಸ್ಯ ನೂರಹ್ಮದ್ ನದಾಫ್, ಗುತ್ತಿಗೆದಾರ ಎಲ್.ಎಂ. ಯಂಡಿಗೇರಿ, ಗೋವಾ ಎಂಆರ್‌ಎ್ ಕಂಪನಿ ಹಿರಿಯ ವ್ಯವಸ್ಥಾಪಕ ಸರ್ವೇಶ ಹಾಲಂಕಾರ, ಭಾನು ಅಸೋಸಿಯೇಟ್ ಎಂ.ಆರ್. ನದಾ ಇತರರಿದ್ದರು.
ಎಚ್.ಎಸ್.ನದಾ ಸ್ವಾಗತಿಸಿದರು. ಕೊತಬಾಳ ಪ್ರಾಸ್ಥಾವಿಕವಾಗಿ ಮಾತನಾಡಿದರು. ರಿಯಾಜ್ ನರೇಗಲ್ ನಿರೂಪಿಸಿದರು. ಮುನ್ನಾ ನದಾ ವಂದಿಸಿದರು.