ತೇರದಾಳ ಪಟ್ಟಣದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ದಾನಿಗೊಂಡ ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ನಶಾ ಮುಕ್ತ ಭಾರತ ಅಭಿಯಾನ ಅಂಗವಾಗಿ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಪ್ರದರ್ಶಿಸಿದರು.
- ಡಾ. ಮಹಾವೀರ ದಾನಿಗೊಂಡ ಸಲಹೆ
- ನಶಾ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ
ತೇರದಾಳ: ಇಂದು ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗಿ, ಜೀವನ ಹಾಳುಮಾಡಿಕೊಳ್ಳುತ್ತಿರುವುದು ಅವರ ಕುಟುಂಬ ಮತ್ತು ದೇಶಕ್ಕೆ ಮಾರಕವಾಗಿದೆ. ದೇಶ ಮತ್ತು ಕುಟುಂಬ ಸದೃಢವಾಗಿ ಉಳಿಯಬೇಕಾದರೇ ದುಶ್ಚಟಗಳಿಂದ ದೂರವಿರಬೇಕೆಂದು ಸಂಸ್ಥಾಪಕ ಚೇರ್ಮನ್ ಡಾ. ಮಹಾವೀರ ದಾನಿಗೊಂಡ ಹೇಳಿದರು.
ಪಟ್ಟಣದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ದಾನಿಗೊಂಡ ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಶಾ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ. ಪ್ರಭಾಕರ ಅಪರಾಜ ಮಾತನಾಡಿ, ಮಾದಕ ವಸ್ತುಗಳ ಹವ್ಯಾಸದದಿಂದ ಮನುಷ್ಯನ ದೇಹ ನಿರಂತರವಾಗಿ ನಾಶವಾಗುವುದರೊಂದಿಗೆ ಆರೋಗ್ಯ ಮತ್ತು ಹಣಕಾಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಟ್ಟ ಹವ್ಯಾಸ ಬಿಟ್ಟು, ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ನರ್ಸಿಂಗ್ ಪ್ರಾಂಶುಪಾಲ ಡಾ. ಅನ್ನಪೂರ್ಣ ಎಸ್, ಫಾರ್ಮಸಿ ಪ್ರಾಂಶುಪಾಲ ಡಾ. ಲೋಕೇಶ್ವರ ಬಾಬು, ಎಸ್‌ಐ ಸಿದ್ದು ಜೈನರ್ ಹಾಗೂ ಕಾಲೇಜ್ ಸಿಬ್ಬಂದಿ, ವಿದ್ಯಾರ್ಥಿಗಳು ಇತರರಿದ್ದರು.
ಪಟ್ಟಣದಲ್ಲಿ ಜಾಗೃತಿ ಜಾಥಾ
ಪಟ್ಟಣದ ಪದ್ಮಾ ಆಸ್ಪತ್ರೆಯಿಂದ ಹೋರಟ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ನಶಾ ಮುಕ್ತ ಭಾರತ ಅಭಿಯಾನದ ಜಾಗೃತಿ ಫಲಕಗಳನ್ನು ಹಿಡಿದುಕೊಂಡು ಬಸ್ ನಿಲ್ದಾಣ, ಮಹಾವೀರ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿದರು. ವಿದ್ಯಾರ್ಥಿಗಳು ಕಿರು ನಾಟಕಗಳನ್ನು ಪ್ರದರ್ಶಿಸಿದರು.