ಬಿವಿವಿ ಸಂಘದಲ್ಲಿ ಸಾಮೂಹಿಕ ಯೋಗ 
ಬಾಗಲಕೋಟೆ

ಬದುಕಿನ ಸಮತೋಲನಕ್ಕೆ ಯೋಗ ಮುಖ್ಯ

ಬಾಗಲಕೋಟೆ: ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಸಾಽಸುವ ಜೀವನ ವಿಧಾನವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮೈದಾನದಲ್ಲಿ ವಿವಿಧ ಮಹಾವಿದ್ಯಾಲಗಳ ಆಶ್ರಯ ಹಾಗೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಭಾನುವಾರ ನಡೆದ ೧೨ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ವೇಗದ ಜೀವನದಲ್ಲಿ ಯೋಗವು ಒತ್ತಡವನ್ನು ಕಡಿಮೆ ಮಾಡಿ, ಆರೋಗ್ಯಕರ ಹಾಗೂ ಸಂತೋಷದ ಬದುಕಿಗೆ ದಾರಿ ತೋರಿಸುತ್ತದೆ. ಆರೋಗ್ಯಕರ ವಯೋವೃದ್ಧಿಗಾಗಿ ಯೋಗ ಈ ವಷÀðದ ಧ್ಯೇಯವಾಕ್ಯವಾಗಿದೆ. ಅದರಂತೆ ನಾವು ಪ್ರತಿದಿನ ಕೆಲವೇ ನಿಮಿಷಗಳಾದರೂ ಯೋಗಕ್ಕೆ ಮೀಸಲಿಟ್ಟರೆ, ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದರು.
ಯೋಗದ ಸಂದೇಶವಾದ ಆರೋಗ್ಯ, ಶಾಂತಿ ಮತ್ತು ಸಾಮರಸ್ಯವನ್ನು ಎಲ್ಲೆಡೆ ಹರಡಬೇಕು. ಯೋಗವು ಭಾರತದ ಪ್ರಾಚೀನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದೆ. ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ, ಮನಸ್ಸು ಶಾಂತವಾಗುತ್ತದೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರೂ ಯೋಗದ ಪ್ರಯೋಜನವನ್ನು ಪಡೆಯಿರಿ ಎಂದು ತಿಳಿಸಿದರು.
ಗಮನ ಸೆಳೆದ ಆಸನಗಳು.
ದೇಹದ ಸಮತೋಲನ ಮತ್ತು ಭಂಗಿಯನ್ನು ಸುಧಾರಿಸುವ ತಾಡಾಸನ, ಏಕಾಗ್ರತೆ ಮತ್ತು ಸಮತೋಲನ ಹೆಚ್ಚಿಸುವ ವೃಕ್ಷಾಸನ,ದೇಹದ ನಮ್ಯತೆಯನ್ನು ಹೆಚ್ಚಿಸುವ ತ್ರಿಕೋನಾಸನ, ಧ್ಯಾನ ಮತ್ತು ಮನಸ್ಸಿನ ಶಾಂತಿಗೆ ಸಹಕಾರಿಯ ಪದ್ಮಾಸನ, ಜೀರ್ಣಕ್ರಿಯೆಗೆ ಸಹಕಾರಿಯಾಗುವ ವಜ್ರಾಸನ ಸೇರಿದಂತೆ ಸೇತು ಭಂದಾಸನ ಸುಖಾಸನ, ಭುಜಂಗಾಸನ, ಶಲಭಾಸನ, ಧನುರಾಸನ, ಪವನಮುಕ್ತಾಸನ, ಸರ್ವಾಂಗಾಸನ, ಹಲಾಸನ, ಶವಾಸನ, ಮಕರಾಸನದ ಭಂಗಿಗಳು ಗಮನ ಸೆಳೆದವು.
ಮೂರು ಕಡೆಗೆ ಏಕಕಾಲಕ್ಕೆ ಯೋಗ :
ಬಿವಿವಿ ಸಂಘದ ವಿವಿಧ ಮಹಾವಿದ್ಯಾಲಯಗಳ ವತಿಯಿಂದ ಭಾನುವಾರ ನಡೆದ ಯೋಗ ದಿನಾಚರಣೆ ನಗರದ ಮೂರು ಪ್ರದೇಶಗಳಲ್ಲಿ ನಡೆಸಲಾಯಿತು. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಬಾಗಲಕೋಟೆ ಬಸವೇಶ್ವರ ಮೈದಾನದಲ್ಲಿ ಹಾಗೂ ಎಸ್.ಎನ್.ಮೆಡಿಕಲ್ ಕಾಲೇಜು ಮೈದಾನದಲ್ಲಿ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಮತ್ತು ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿAಗ್ ಕಾಲೇಜಿನ ಮೈದಾನದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ನೇತೃತ್ವದಲ್ಲಿ ನಡೆಯಿತು.
ಮೂರು ಕಡೆಗೆ ಸಂಘದ ವಿವಿಧ ಶಾಲೆ, ಕಾಲೇಜುಗಳು ವಿದ್ಯಾರ್ಥಿಗಳು, ಸಿಬ್ಬಂದಿ, ಸಾರ್ವಜನಿಕರು, ಸಂಘದ ಸದಸ್ಯರು ಒಳಗೊಂಡು ಅಂದಾಜು ೧೦ ಸಾವಿರದಷ್ಟು ಜನರು ಯೋಗದಲ್ಲಿ ಪಾಲ್ಗೊಂಡಿದ್ದರು.
ಬಾಗಲಕೋಟೆ ಬಿವಿವಿ ಸಂಘದ ವಿವಿಧ ಮಹಾವಿದ್ಯಾಲಯಗಳ ಆಶ್ರಯ ಹಾಗೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಶನಿವಾರ ಬಸವೇಶ್ವರ ಮೈದಾನದಲ್ಲಿ ಶನಿವಾರ ಅಂತಾರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ಸಂಘದ ಸದಸ್ಯರು ಮತ್ತು ಸಾರ್ವಜನಿಕರು.