ಬಾದಾಮಿ ನಗರದ ಕುಮಾರೇಶ್ವರರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಎಲ್‌ಐಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಮಹಾಸಭೆ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಬೆಳಗಾವಿ ವಿಭಾಗದ ಅಧ್ಯಕ್ಷ ಪದ್ಮರಾಜ ತಡಸದ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎಸ್.ಪಿ.ತೆಗ್ಗಿನಮನಿ, ಎಲ್.ಐ.ಸಿ.ಶಾಖಾಧಿಕಾರಿ ಇಕ್ಬಾಲ್ ಅಹ್ಮದ ಸಾಗರ, ಬೆಳಗಾವಿ ವಿಭಾಗದ ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಗೋಕಾಕ, ಸಹ ಕಾರ್ಯದರ್ಶಿ ಎಸ್.ಡಿ.ಯಲಿಗಾರ ಇತರರಿದ್ದರು. 
ಬಾಗಲಕೋಟೆ

ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಬೆಳಗಾವಿ ವಿಭಾಗದ ಪದ್ಮರಾಜ ತಡಸದ ಹೇಳಿಕೆ
  • ಎಲ್‌ಐಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ
  • ಎಲ್ಲರೂ ಒಗ್ಗಟ್ಟಾಗಿ ಸಂಘಟಿತರಾದಾಗ ಸಾಮೂಹಿಕ ಧ್ವನಿಯಾಗಿ ರೂಪಗೊಳ್ಳುತ್ತದೆ.
ಬಾದಾಮಿ:

ಎಲ್ಲರೂ ಒಗ್ಗಟ್ಟಾಗಿ ಸಂಘಟಿತರಾದಾಗ ಸಾಮೂಹಿಕ ಧ್ವನಿಯಾಗಿ ರೂಪಗೊಳ್ಳುತ್ತದೆ. ಸಂಘಟನೆ ಎಂದರೆ ಪದಾಧಿಕಾರಿಗಳ ಆಯ್ಕೆ ಮಾಡುವುದಲ್ಲ. ಸಂಘಟನೆಯ ಪ್ರತಿಯೊಬ್ಬ ಪ್ರತಿನಿಧಿಯ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಬೆಳಗಾವಿ ವಿಭಾಗದ ಅಧ್ಯಕ್ಷ ಪದ್ಮರಾಜ ತಡಸದ ಹೇಳಿದರು.

ನಗರದ ಕುಮಾರೇಶ್ವರರ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಲ್‌ಐಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಮಹಾಸಭೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿನಿಧಿಗಳ ಸಂಘಟನೆ ಒಬ್ಬರರಾಗಿ ಕೆಲಸ ಮಾಡಿದಾಗ ಅವರ ಸಮಸ್ಯೆ ವಯಕ್ತಿಕ ಸಮಸ್ಯೆಯಾಗಿರುತ್ತದೆ. ಪ್ರತಿಯೊಬ್ಬರ ಪ್ರತಿನಿಧಿಯ ಸಮಸ್ಯೆ ತನ್ನದೇ ಸಮಸ್ಯೆ ಎಂದು ಭಾವಿಸಿ ಪರಸ್ಪರ ಸಹಕಾರದಿಂದ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಎಲ್‌ಐಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಪಿ.ತೆಗ್ಗಿನಮನಿ ಅಧ್ಯಕ್ಷತೆ ವಹಿಸಿದ್ದರು. ಎಲ್.ಐ.ಸಿ.ಶಾಖಾಧಿಕಾರಿ ಇಕ್ಬಾಲ್ ಅಹ್ಮದ ಸಾಗರ, ಎಲ್‌ಐಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಬೆಳಗಾವಿ ವಿಭಾಗದ ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಗೋಕಾಕ, ಸಹ ಕಾರ್ಯದರ್ಶಿ ಎಸ್.ಡಿ.ಯಲಿಗಾರ, ಉಪಾಧ್ಯಕ್ಷ ವಿ.ಎಸ್.ಪಾರ್ವತಿಮಠ, ಖಜಾಂಚಿ ಐ.ಎಂ.ಮುಲ್ಲಾನವರ, ಪ್ರಧಾನ ಕಾರ್ಯದರ್ಶಿ ಸುರೇಶ ಜಾಲಿಹಾಳ ಉಪಸ್ಥಿತರಿದ್ದರು. ಹೊನ್ನಯ್ಯ ಹಿರೇಮಠ ಸ್ವಾಗತಿಸಿದರು. ಸುಭಾಸ ಘಂಟಿಮಠ ವಂದಿಸಿದರು.